ಕೆ ಆರ್ ನಗರ.: ಅನ್ನ ಆರೋಗ್ಯ ಶಿಕ್ಷಣ ಉದ್ಯೋಗ ಮತ್ತು ಜನಸೇವೆಗೆ ವಿಶ್ವಕ್ಕೆ ಮಾದರಿಯಾಗಿದೆ ಶ್ರೀ ಆದಿಚುಂಚನಗಿರಿ ಮಠ ಮತ್ತು ಶ್ರೀಗಳು ಎಂದು ಮಾಜಿ ಸಚಿವ ಸಾರಾ ಮಹೇಶ್ ಶ್ರೀ ಆದಿಚುಂಚನಗಿರಿ ಮಠ ಮತ್ತು ಶ್ರೀ ಡಾ. ನಿರ್ಮಲಾನಂದ ನಾಥ ಸ್ವಾಮೀಜಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಪಟ್ಟಣದ ಎಚ್ .ಡಿ ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘ ಏರ್ಪಡಿಸಿದ್ದ ನಾಡು ಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಅಭಿನಂದಿತ ರಿಗೆ ಸನ್ಮಾನಿಸಿ ಮಾತನಾಡಿದ ಅವರು ಆದಿಚುಂಚನಗಿರಿ ಕ್ಷೇತ್ರ ರಾಜ್ಯ ವ್ಯಾಪ್ತಿಯಲ್ಲಿದೆ ವಿದೇಶಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದೆ ಎಂದು ತಿಳಿಸಿದರು.
ನಾನು 15 ವರ್ಷಗಳ ಶಾಸಕರಾಗಿದ್ದ ಅವಧಿಯಲ್ಲಿ ನನ್ನ ಸಮುದಾಯದವರು ಕೆಂಪೇಗೌಡರ ಜಯಂತಿಯನ್ನು ಮಾಡುವುದು ಬೇಡ ಎಂದು ಹೇಳಿದ್ದೆ ಈ ಕ್ಷೇತ್ರದಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಅತ್ಯಂತ ಕೆಟ್ಟ ಕಡೆಯ ಸಮುದಾಯದವರು ಸಹ ನನ್ನನ್ನು ಬೆಂಬಲಿಸಿ ಮತನೀಡುತ್ತಾ ಬೆಂಬಲಿಸಿದರು ಆ ಸಮುದಾಯಗಳ ಮಹನೀಯರಾಜಯಂತಿಯನ್ನು ಮಾಡುವ ಮೂಲಕ ನಮ್ಮ ಸಮುದಾಯವೂ ಸಹ ಉದಾರ ಮನೋಭಾವವನ್ನು ತೋರಿಸುತ್ತಾ ಜಾತ್ಯತೀತ ಮನೋಭಾವವನ್ನು ಬೆಳೆಸಿಕೊಂಡಿದ್ದರು ಆದರೆ ಇಂದು ಸಂಘದ ಮುಖಂಡರು ಆದಿಚುಂಚನಗಿರಿ ಶ್ರೀಗಳೆ ಬಂದು ಕಾರ್ಯಕ್ರಮವನ್ನು ಉದ್ಘಾಟಿಸುವುದರಿಂದ ಬರಲೇಬೇಕು ಎಂದು ಹಠ ಹಿಡಿದ್ದರಿಂದ ನಾನು ಬಂದಿದ್ದೇನೆ ಎಂದು ತಿಳಿಸಿದರು.
ನಾಡು ಪ್ರಭು ಕೆಂಪೇಗೌಡರು ಸುಂದರ ಬೆಂಗಳೂರು ನಗರವನ್ನು ನಿರ್ಮಿಸುವ ಜೊತೆಗೆ ಸುತ್ತಮುತ್ತಲ ಕೆರೆಕಟ್ಟೆಗಳು ರೈತರು ಮತ್ತು ಜನರಿಗೆ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ಸಹಾಯವಾಗುವ ಜೊತೆಗೆ ಜಾತ್ಯತೀತವಾಗಿ ಎಲ್ಲಾ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡಿದ್ದರು ಎಂದು ಸ್ಮರಿಸಿದರು.
ಅವರ ನಂತರ ಈ ನಾಡಿಗೆ ನೀರಾವರಿ ಯೋಜನೆಗಾಗಿ ಕೆರೆಕಟ್ಟೆಗಳ ಅಭಿವೃದ್ಧಿಯ ಜೊತೆಗೆ ಕಾಲುವೆಗಳನ್ನು ತೆಗೆಸುವ ಮೂಲಕ ರೈತರಿಗೆ ಮತ್ತು ಜನರಿಗೆ ಕುಡಿಯುವ ನೀರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಂತ ಯಾರಾದರೂ ನಾಯಕರಿದ್ದರೆ ಅದು ನಮ್ಮ ಮಾಜಿ ಪ್ರಧಾನ ಮಂತ್ರಿಗಳು ಎಚ್ ಡಿ ದೇವೇಗೌಡರು ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ತಂದು ನೀರಾವರಿ ರಸ್ತೆ ವಿದ್ಯುತ್ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜೊತೆಗೆ ಏತ ನೀರಾವರಿ ಕಟ್ಟೆಯ ಆಧುನಿಕರಣ ದೇವಾಲಯಗಳ ಅಭಿವೃದ್ಧಿ ಸಮುದಾಯ ಭವನಗಳ ಸ್ಥಾಪಿಸುವ ಮೂಲಕ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಮುಂಡಿಗನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲಕ್ಕಾಗಿ 24 ಕೋಟಿಗಳ ಅನುದಾನವನ್ನು ಕೆರೆ ಅಭಿವೃದ್ಧಿಪಡಿಸುವ ಜೊತೆಗೆ ಏತ ನೀರಾವರಿಯ ಮೂಲಕ ಕೆರೆಗೆ ನೀರು ತುಂಬಿಸಿ ಈ ಭಾಗದ ನಾಲ್ಕೈದು ಗ್ರಾಮಗಳಿಗೆ ಅನುಕೂಲವಾಗಲೆಂದು ಅನುದಾನವನ್ನು ಮೀಸಲಿಟ್ಟು ಕಾಮಗಾರಿಯನ್ನು ಗುದ್ದಲಿ ಪೂಜೆಯನ್ನು ನೆರವೇರಿಸಿದ್ದರು ಆದರೆ ಈಗಿನ ಸರ್ಕಾರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಶಾಸಕರು ಯಾವುದೇ ಉಪಯೋಗವಿಲ್ಲದ ಆ ಸಮುದಾಯದ ಗ್ರಾಮಕ್ಕೆ ಬಳಕೆ ಮಾಡಿಕೊಂಡು ಈಗಾಗಲೇ ಒಂದು ಕೋಟಿಗೂ ಹೆಚ್ಚು ಕಾಮಗಾರಿಯನ್ನು ಮಾಡಲಾಗಿದೆ ಈ ಬಗ್ಗೆ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮುಖಂಡರು ಸೇರಿದಂತೆ ಆ ಗ್ರಾಮದ ಸುತ್ತಮುತ್ತಲಿನ ಜನರು ಪ್ರಶ್ನೆ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮತ್ತು ಉದ್ಘಾಟನೆ ಮಾಡಿದ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ ನಮ್ಮ ಸಮುದಾಯದ ಕೆಂಪೇಗೌಡರ ಸಾಧನೆ ಯಾವುದೇ ಅಧಿಕಾರ ಮತ್ತು ಆಸೆಗಳಿಲ್ಲದೆ ತಮ್ಮ ಸ್ವಂತ ಭೂಮಿಯನ್ನೇ ನೀಡುವ ಮೂಲಕ ಬೆಂಗಳೂರು ನಗರಕ್ಕೆ ನಿರ್ಮಾಣ ಹಾಗೂ ಕೆರೆಕಟ್ಟೆಗಳನ್ನು ತುಂಬಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು ಎಂದು ತಿಳಿಸಿದರು.
ಆದರೆ ಕೆಂಪೇಗೌಡರ ನಂತರ ನಮ್ಮ ಸಮುದಾಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ಕೆ ಸಿ ರೆಡ್ಡಿ ರಾಜ್ಯದ ಅಭಿವೃದ್ಧಿಪರ ಕೆಲಸ ಮಾಡಿ ಜನ ಸಾಮಾನ್ಯರ ಮನಸ್ಸಿನಲ್ಲಿದ್ದರೆ ಅವರೆಲ್ಲರಿಗಿಂತ ಮುಂದೆ ಹೋಗಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರು ವಿಶ್ವ ನಾಯಕರಾಗಿ ವಿಶ್ವ ನಾಯಕರ ಕವನಗಳು ಜ್ಞಾನಗಳ ಬಗ್ಗೆ ಸವಿಸ್ತಾರವಾಗಿ ತಿಳಿದು ಅವರಂತೆಯೇ ಈ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು ಎಂದು ವರ್ಣಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿಯಾಗಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಒಬ್ಬ ರೈತನ ಮಗ ಈ ದೇಶವನ್ನಾಳಬಲ್ಲ ಎಂಬುದನ್ನು ತೋಡಿ ತೋರಿಸಿಕೊಟ್ಟ ಮಹಾನ್ ದೈವ ಭಕ್ತ ಈ ರಾಜ್ಯದ ಈ ಕನ್ನಡದ ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಆಡಳಿತ ಆಡಳಿತ ನಡೆಸಿದ ಏಕೈಕ ವ್ಯಕ್ತಿ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ನಮ್ಮ ಸಮುದಾಯಕ್ಕೆ ಒಂದು ಕಿರೀಟವಿದ್ದಂತೆ ಎಂದು ತಿಳಿಸಿದ ಶ್ರೀಗಳು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ಎಂ ಕೃಷ್ಣರವರು ಸಹ ಮುಖ್ಯಮಂತ್ರಿಯಾಗಿ ವಿದೇಶಾಂಗ ಸಚಿವರಾಗಿ ರಾಜ್ಯಪಾಲರಾಗಿ ಯಶಸ್ವಿಯಾಗಿ ಆಡಳಿತ ನಡೆಸಿದ್ದರು ಎಂದು ತಿಳಿಸಿದರು.
ಈ ಮಹಾನ್ ಇಬ್ಬರು ದಿಗ್ಗಜರರನ್ನು ಕೆ ಆರ್ ನಗರ ಒಕ್ಕಲಿಗ ಸಮುದಾಯ ಭವನವನ್ನು ಉದ್ಘಾಟನೆ ಮಾಡಲು ಕರೆತಂದು ಒಂದೇ ವೇದಿಕೆಯಲ್ಲಿ ಕೂರಿಸಿದ ಕೀರ್ತಿ ಮಾಜಿ ಸಚಿವ ಸಾರಾ ಮಹೇಶ್ ಅವರಿಗೆ ಸಲ್ಲುತ್ತದೆ ಸಾರಾ ಮಹೇಶ್ ಅವರು ಸಹ ನೇರ ನುಡಿಯ ಅತ್ಯಂತ ದಕ್ಷ ಪ್ರಾಮಾಣಿಕ ರಾಜಕಾರಣಿಯಾಗಿ ಈ ಕ್ಷೇತ್ರದ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯ ಜೊತೆ ನಿಂತ ರಾಜಕಾರಣಿಯಾಗಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರಿಗೆ ಇತಿಹಾಸವಿದೆ ನಾವು ನಮ್ಮ ಸಮುದಾಯ ಎಂದು ಹೇಳಿಕೊಳ್ಳಲು ಭಯಪಡುವ ಆತಂಕವಿಲ್ಲ ಹೆತ್ತ ತಾಯಿಯನ್ನು ನಮ್ಮ ತಾಯಿ ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ತಮ್ಮ ಸಮುದಾಯವನ್ನು ನಮ್ಮ ಸಮುದಾಯ ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು ಸುಮಾರು 800 ವರ್ಷಗಳ ಹಿಂದೆ ಗಂಗರು ನಮ್ಮ ಪೂರ್ವಜರು ಅವರು ಸಹ ಈ ರಾಜ್ಯವನ್ನಾಳಿದಂತಹ ರಾಜವಂಶಸ್ಥರು ನಾವು ಎಂದು ತಿಳಿಸಿದರು ವಿಷ್ಣುವರ್ಧನನ ಪಟ್ಟದರಸಿ ಶಾಂತಲೆಯೂ ಸಹ ನಮ್ಮ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೊಟ್ಟದ ರಾಣಿಯಾಗಿ ಹಲವು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರವನ್ನು ಮಾಡುತ್ತಿರುವ ಉದ್ದೇಶದ ಹಿಂದೆ ಒಂದು ಅರ್ಥವಿದೆ ವಿದ್ಯಾರ್ಥಿಗಳು ಸಹ ಈ ಮಹನೀಯರಂತೆ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಶಾಖ ಮಠದ ಶ್ರೀ ಸೋಮನಾಥ ಸ್ವಾಮಿಗಳು ವಿಧಾನಪರಿಷತ್ ಸದಸ್ಯ ಸಿಎನ್ ಮಂಜೇಗೌಡ ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್ ಪಿ ಯೋಗಣ್ಣ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಎಸ್ ಪಿ ತಮ್ಮಯ್ಯ ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ ಎನ್ ಬಸಂತು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು ಉಪಾಧ್ಯಕ್ಷ ಕುಚಲ ನಿರ್ದೇಶಕರುಗಳಾದ ರಾಧಾಕೃಷ್ಣ ದೇವೇಂದ್ರ ವಕೀಲ ತಿಮ್ಮೇಗೌಡ ಪ್ರಕಾಶ ಸಂತೋಷ್ ಗೌಡ ಮಂಜೇಗೌಡ ಕೇಶವ ಮಂಜುನಾಥ್ ನಂಜುಂಡೇಗೌಡ ಹೊಸಳ್ಳಿ ವೆಂಕಟೇಶ್ ರಾಮಲಿಂಗ ನರೇಂದ್ರ ಸಂಪತ್ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


