
ವಿಜಯ ಶಾಶ್ವತವಲ್ಲ, ಕಾಲ ನಿಲ್ಲುವುದಿಲ್ಲ…
`ನಮ್ಮ ಅಭಿವ್ಯಕ್ತಿ – ನಮ್ಮ ಶಕ್ತಿ‘ ಎಂಬ ಧ್ಯೆಯದೊಂದಿಗೆ ಮಾಧ್ಯಮ ಲೋಕಕ್ಕೆ ವಿಜಯಕಾಲ ದಿನಪತ್ರಿಕೆಯ ಆನ್‍ಲೈನ್ ವೆಬ್‍ಸೈಟ್ ಸೇರ್ಪಡೆಗೊಂಡಿದೆ. ಇಲ್ಲಿ ನಿಮಗೆ ಸುದ್ದಿ ಮಾತ್ರವಲ್ಲ ಸಂವೇದನೆ ಮತ್ತು ಸಂವಾದಕ್ಕೂ ಅವಕಾಶವಿದೆ. ಮಾನವ ಹಕ್ಕು ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಲಿದೆ. ಓದುಗರ ಒಡಲಾಳದ ವೇದನೆಗೆ ವೇದಿಕೆಯಾಗಲಿದೆ. ಮಾಧ್ಯಮ ಎನ್ನುವುದು ಅರಿವು ಎಂಬ ಪ್ರಜ್ಞೆಯೊಂದಿಗೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ದಾರಿಯಾಗಲಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಆಸರೆಯಾಗಲಿದೆ. ಪ್ರಶ್ನಿಸುವುದು, ಮಾತನಾಡುವುದು, ಬರೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ದ್ರೋಹಿಗಳಿಗಿಂತ್ತ ಮೌನಿಗಳು ಈ ಸಮಾಜಕ್ಕೆ ಬಹುದೊಡ್ಡ ಅಪಾಯ. ಒಬ್ಬ ಒಳ್ಳೆಯ ಪತ್ರಕರ್ತ ಏನನ್ನು ಹೇಳಬಹುದೋ, ಏನನ್ನು ಬರೆಯಬಹುದೋ, ಏನನ್ನು ತೋರಿಸಬಹುದೋ ಅಷ್ಟನ್ನೇ ನಾವು ಮಾಡುತ್ತೇವೆ. ಪ್ರತಿಯೊಬ್ಬರೂ ಅಜ್ಞಾನದಿಂದ ಜ್ಞಾನದ ಕಡೆಗೆ ಮುಖ ಮಾಡಬೇಕೆನ್ನುವುದೇ ನಮ್ಮ ಹಂಬಲ… ಆಮೂಲಕ ಎಲ್ಲರ ಬದುಕಿನಲ್ಲಿ ಬರಲಿ ಶಾಶ್ವತ ವಿಜಯಕಾಲ.
ಕೆ.ದೀಪಕ್,
ಪತ್ರಕರ್ತ, ಮೈಸೂರು.