Online News in ಕನ್ನಡ

ದಸರಾ ಗೋಲ್ಡ್‌ ಕಾರ್ಡ್‌, ಟಿಕೆಟ್‌ ಗಳನ್ನು ಪಡೆದುಕೊಳ್ಳಲು ಹೀಗೆ ಮಾಡಿ…

ಮೈಸೂರು: ಈ ಬಾರಿಯ ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಎಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವವರಿಗೆ ಜಿಲ್ಲಾಡಳಿತ ಗೋಲ್ಡ್‌ ಕಾರ್ಡ್‌, ಟಿಕೆಟ್‌ ಗಳನ್ನು ಬಿಡುಗಡೆ ಮಾಡಿದ್ದು, ಇಂದಿನಿಂದ ಆನ್‌ ಲೈನ್‌ ಮುಖಾಂತರ ಪಡೆದುಕೊಳ್ಳಬಹುದಾಗಿದೆ.

ಸೆ.22 ರಿಂದ ಅ.2 ರವರೆಗೆ ನಡೆಯಲಿರುವ ದಸರಾದಲ್ಲಿ ಗೋಲ್ಡ್‌ ಕಾರ್ಡ್‌ ಪಡೆದು ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಈ ಸಂಬಂಧ ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಸಾರ್ವಜನಿಕರಿಗೆ ದಸರಾ ಗೋಡ್ ಕಾರ್ಡ್ ಮತ್ತು ಟಿಕೆಟ್‌ಗಳು ಸೆ. 6ರಿಂದ ಮೈಸೂರು ದಸರಾ ಅಧಿಕೃತ  ಜಾಲತಾಣ https://mysoredasara.gov.in/ ರಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸಾರ್ವಜನಿಕರು ಆನ್ ಲೈನ್  ಮೂಲಕ ಖರೀದಿಸಬಹುದಾಗಿದ್ದು, ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Call Now Button