Online News in ಕನ್ನಡ

ಸೋಮವಾರದಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ; ಇಲ್ಲಿದೆ ನೋಡಿ ಹೊಸ ದರಪಟ್ಟಿ

ಬೆಂಗಳೂರು: ಅ.22ರಿಂದ ಹೊಸ ಜಿಎಸ್‌ ಟಿ ತೆರಿಗೆ ಅನ್ವಯ ಆಗಲಿದ್ದು, ನಂದಿನ ಉತ್ಪನ್ನಗಳ ಮೇಲಿನ ತೆರಿಗೆಯೂ ಕಡಿಮೆ ಆಗಲಿದೆ. ಈ ಲಾಭವನ್ನು ನೇರವಾಗಿ ಗ್ರಾಹಕರಿಗೆ ನೀಡಲು ಕೆಎಂಎಫ್‌ ತೀರ್ಮಾನಿಸಿದ್ದು, ಸೋಮವಾರದಿಂದ ನಂದಿನಿ ಉತ್ಪನ್ನಗಳ ಬೆಲೆಯನ್ನು ಜಿಎಸ್‌ ಟಿಗೆ ಅನುಗುಣವಾಗಿ ಇಳಿಕೆ ಮಾಡಲು ನಿರ್ಧರಿಸಿದೆ.

ಪ್ರಸ್ತುತ ನಂದಿನಿ ಬ್ರಾಂಡ್‌ನ ಕೆಲ ಉತ್ಪನ್ನಗಳಿಗೆ ಶೇ.12 ರಷ್ಟು, ಮತ್ತೂ ಕೆಲ ಉತ್ಪನ್ನಗಳಿಗೆ ಶೇ. 5ರಷ್ಟು ಜಿಎಸ್‌ಟಿ ಹಾಕಲಾಗುತ್ತಿತ್ತು. ಇದೀಗ ಶೇ. 12ರಷ್ಟು ಇದ್ದ ತೆರಿಗೆ ಹೊರೆ ಶೇ. 5ಕ್ಕೆ ಇಳಿಯಲಿದೆ. ಶೇ. 5ರ ಪಟ್ಟಿಯಲ್ಲಿ ಇದ್ದ ಉತ್ಪನ್ನಗಳ ಮೇಲಿನ ಜಿಎಸ್‌ ಟಿ ಶೂನ್ಯಕ್ಕೆ ಇಳಿಯಲಿದೆ. ಹೀಗಾಗಿ ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ದೊರೆಯಲಿದೆ.

  • ಹೀಗಿದೆ ನೋಡಿ ನಂದಿನಿ ಉತ್ಪನ್ನಗಳ ಹೊಸ ದರಪಟ್ಟಿ:
  • ತುಪ್ಪ (1000 ಮಿ.ಲಿ): ಹಳೆ ದರ ₹650 – ಹೊಸ ದರ ₹610
  • ಬೆಣ್ಣೆ (500 ಗ್ರಾಂ): ₹305 – ₹286
  • ಪನ್ನೀರ್ (1000 ಗ್ರಾಂ): ₹425 – ₹408
  • ಗುಡ್ ಲೈಫ್ ಹಾಲು (1000 ಮಿ.ಲಿ): ₹70 – ₹68
  • ಸಂಸ್ಕರಿಸಿದ ಚೀಸ್: ₹530 – ₹497
  • ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್ (5000 ಮಿ.ಲಿ): ₹645 – ₹574
  • ಐಸ್‌ಕ್ರೀಮ್ ವೆನಿಲಾ ಟಬ್ (1000 ಮಿ.ಲಿ): ₹200 – ₹178
  • ಐಸ್‌ಕ್ರೀಮ್ ಚಾಕಲೇಟ್ ಸಂಡೇ: ₹115 – ₹102
  • ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್: ₹35 – ₹31
  • ಖಾರಾ ಉತ್ಪನ್ನಗಳು: ₹60 – ₹56
  • ಮಫಿನ್‌ಗಳು: ₹50 – ₹45
  • ನಂದಿನಿ ನೀರು (1000 ಮಿ.ಲಿ): ₹20 – ₹18
  • ಜಾಮೂನು ಮಿಶ್ರಣ: ₹80 – ₹71
  • ಬಾದಾಮ್ ಹಾಲಿನ ಪುಡಿ (200 ಗ್ರಾಂ): ₹120 – ₹107
  • ಕುಕೀಸ್ (100 ಗ್ರಾಂ): ₹35 – ₹31
  • ರೈಸ್ ಕ್ರಿಸ್ಪಿ ಮಿಲ್ಕ್ ಚಾಕೋ (80 ಗ್ರಾಂ): ₹65 – ₹58
  • ಕೇಕ್‌ಗಳು (200 ಗ್ರಾಂ): ₹110 – ₹98
  • ಬೌನ್ಸ್ (200 ಮಿ.ಲಿ): ₹15 – ₹15 (ಅದೇ ದರ)

 

Call Now Button