Online News in ಕನ್ನಡ

“ಪ್ಲರ್ಟ್” ಚಲನಚಿತ್ರ ನವೆಂಬರ್ 28 ರಂದು ರಾಜ್ಯಾದ್ಯಂತ ಬಿಡುಗಡೆ

 

ಮೈಸೂರು:  ಕಿರುತೆರೆ,  ಬೆಳ್ಳಿತೆರೆ ಎರಡರಲ್ಲೂ ಛಾಪು ಮೂಡಿಸಿರುವ ನಟ ಚಂದನ್‌ಕುಮಾರ್ ರವರ ಪ್ರಥಮ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಪ್ಲರ್ಟ್, ಚಂದನ್‌ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗೂ ನಟಿಸಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಮೂಲಕ ಚಂದನ್‌ಕುಮಾರ್ ನಿರ್ಮಾಪಕರಾಗಿದ್ದು ಕವಿತಾಚಂದನ್ ಕುಮಾರ್ ಸಹ ನಿರ್ಮಾಪಕರಾಗಿ ನಿರ್ಮಾಣ ಮಾಡಿದ್ದಾರೆ.

ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಪ್ಲರ್ಟ್ ಚಿತ್ರಕ್ಕಿದ್ದು ನಿಮಿಕಾ ರತ್ನಾಕರ್, ಅಕ್ಷತಾ ಬೋಪಯ್ಯ ನಾಯಕಿಯರಾಗಿ ನಟಿಸಿದ್ದಾರೆ.

ಈಗಾಗಲೇ ಕಿಚ್ಚ ಸುದೀಪ್ ಹಾಡಿರುವ ನೀ ನನ್ನ ಜೀವ ಎಂಬ ಫ್ರೆಂಡ್‌ಶಿಪ್ ಸಾಂಗ್ ಎಲ್ಲಾ ಕಡೆ ವೈರಲ್ ಆಗಿದ್ದು ಅತಿ ಹೆಚ್ಚು ವೀಕ್ಷಣೆಯಾಗುತ್ತಿದೆ. ಇದೊಂದು ರೋಮ್ ಕಾಮ್ ಚಿತ್ರವಾದರೂ ಫ್ರೆಂಡ್‌ಶಿಪ್. ಲವ್. ಹೀಗೆ ಎಲ್ಲಾ ಎಂಟರ್‌ಟೈನಿಂಗ್ ಎಲಿಮೆಂಟ್ಸ್ ಇದೆ. ಪ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ, ಗಾಢವಾದ ಪ್ರೀತಿಯನ್ನೂ ಸಹ ಪ್ಲರ್ಟ್ ಎಂದೇ ಕರೆಯುತ್ತಾರೆ. ಎಲ್ಲರ ಡವ್‌ನಲ್ಲು ಒಂದೊಂದು ಲವ್ ಇರುತ್ತದೆ. ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ವ್ಯಾಲ್ಯು ಇದ್ದು ರೋಮ್ ಕಾಮ್ ಜೊತೆಗೆ ಸೈಕೋ ಕ್ಯಾರೆಕ್ಟ‌ರ್ ಕೂಡ ಚಿತ್ರದಲ್ಲಿದೆ.

ಸುದೀಪ್‌ ರವರ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದು, ಜಸ್ಸಿ ಗಿಫ್ಟ್ ಉಳಿದ ಮೂರು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಹೆಚ್.ಸಿ. ವೇಣು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಂದನ್‌ಕುಮಾರ್, ನಿಮಿಕಾ ರತ್ನಾಕರ್, ಅಕ್ಷಿತಾಬೋಪಯ್ಯ, ಹಿರಿಯನಟ ಅವಿನಾಶ್, ನಟಿ ಶೃತಿ, ಸಾದುಕೋಕಿಲ, ಗಿರೀಶ್‌ಶಿವಣ್ಣ, ವಿನಯ್‌ ಗೌಡ, ರಂಗಾಯಣರಘು, ಅಶೋಕ್‌ಹೆಗ್ಡೆ, ಅರವಿಂದ್‌ರಾವ್, ಮೂಗು ಸುರೇಶ್ ತಾರಾಬಳಗವಿದೆ.

ಚಿತ್ರವು ಇದೇ ನವೆಂಬರ್ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Call Now Button