ಮೈಸೂರು: ಮೈಸೂರಿನ ಉದ್ಯಮಿಯೋರ್ವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕಿಡ್ನಾಪರ್ಗಳನ್ನು ಬಂಧಿಸಿ, ಅಪಹರಣವಾಗಿದ್ದವರನ್ನು ರಕ್ಷಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಉದ್ಯಮಿ ಲೋಕೇಶ್ ಎಂಬುವರೇ ಅಪಹರಣಕ್ಕೆ ಒಳಗಾಗಿ ರಕ್ಷಿಸಲ್ಪಟ್ಟ ವ್ಯಕ್ತಿ.
ಈ ಪ್ರಕರಣದ ಆರೋಪಿಗಳಾದ ಹೆಚ್.ಎಂ. ಸಂತೋಷ್, ಹೆಚ್.ಎಸ್ ಅಭಿಷೇಕ್, ಆರ್. ಪ್ರಜ್ವಲ್ ಮತ್ತು ಬಿ.ಎನ್. ದರ್ಶನ್ ಅವರನ್ನು ಬಂಧಿಸಲಾಗಿದ್ದು, ಕುಟುಂಬದ ಸದಸ್ಯರಿಂದ ಹಣ ಪಡೆಯಲು ಹೋಗಿದ್ದ ಪ್ರೀತಮ್ ಎಂಬ ವ್ಯಕ್ತಿಗಾಗಿ ಶೋಧನೆ ನಡೆಯುತ್ತಿದೆ.
ಡಿ.೬ರಂದು ರಾತ್ರಿ ೮.೧೫ರಲ್ಲಿ ವಿಜಯನಗರ ೩ನೇ ಹಂತದಲ್ಲಿರುವ ಹೆರಿಟೇಜ್ ಕ್ಲಬ್ನಿಂದ ಮನೆಗೆ ತೆರಳು ಹೊರಗೆ ಬಂದಾಗ ಸ್ವಲ್ಪ ದೂರದಲ್ಲಿ ಲೋಕೇಶ್ ಮೇಲೆ ಸಂತೋಷ್ ಹಲ್ಲೆ ನಡೆಸಲು ಮುಂದಾದ ತಕ್ಷಣ ಇನ್ನೂ ನಾಲ್ವರು ಸೇರಿಕೊಂಡು ಕಣ್ಣಿಗೆ ಕಾರದ ಪುಡಿ ಎರಚಿ ಟಾಟಾ ಸುಮೊ ಕಾರಿನಲ್ಲಿ ಅಪಹರಿಸಿದ್ದಾರೆ. ನಂತರ ಅವರ ಪತ್ನಿಗೆ ಮೊಬೈಲ್ ಕರೆ ಮಾಡಿ ೧ ಕೋಟಿ ರೂ.ಗಳ ಹಣ ನೀಡಬೇಕು. ಇಲ್ಲದಿದ್ದರೆ ನಿನ್ನ ಪತ್ನಿಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಈ ಬಗ್ಗೆ ಉದ್ಯಮಿಯ ಪತ್ನಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆಯೆ ಕಾರ್ಯಪ್ರವೃತ್ತರಾದ ಪೊಲೀಸರು ಹೆರಿಟೇಜ್ ಕ್ಲಬ್ ಬಳಿ ಆಗಮಿಸಿ ಪರಿಶೀಲನೆ ನಡೆಸಲಾಗಿ ಸ್ಥಳದಲ್ಲಿ ಅಪಹರಣಗೊಂಡಿದ್ದ ಲೋಕೇಶ್ನ ಚಪ್ಪಲಿ ಮತ್ತು ಕಾರದ ಪುಡಿ ಕಂಡು ಬಂದಿದೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀರು ಲೋಕೇಶ್ನ ಪತ್ನಿಯ ಮೂಲಕವೇ ದುಷ್ಕರ್ಮಿಗಳ ಸಂಪರ್ಕಕ್ಕೆ ಬಂದು ಹಣ ಕೊಡುವುದಾಗಿ ಹೇಳಿ ಆರೋಪಿಗಳನ್ನು ಕೆ.ಆರ್.ನಗರ ಹಂಪಾಪುರ ಬಳಿ ಬಂಧಿಸಿದ್ದಾರೆ.

ಉದ್ಯಮಿ ಲೋಕೇಶ್ ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ರಸ್ತೆಯ ಪಂಪ್ ಹೊಸಳ್ಳಿ ಗ್ರಾಮದವನಾಗಿದ್ದು ಈತನಿಗೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ನ ಪರಿಚಯವಿತ್ತು. ಮತ್ತು ಲೋಕೇಸ್ ಫೈನಾನ್ಸ್ ರಿಯಲ್ ಎಸ್ಟೇಟ್ನಲ್ಲಿ ಸಾಕಷ್ಟು ಹಣ ಮಾಡಿದ್ದಾನೆ ಎಂಬ ವಿಚಾರವೂ ಗೊತಿತ್ತು. ಈ ಹಿನ್ನಲ್ಲೆಯಲ್ಲಿ ಸಂತೋಷ್ ಎಂಬಾತ ತನ್ನದೇ ಊರಿನ ಪ್ರಜ್ವಲ್, ಪ್ರೀತಮ್, ದರ್ಶನ್ ಮತ್ತು ಮೇಟಗಳ್ಳಿ ನಿವಾಸಿ ಅಭಿಷೇಕ್ ಅವರೊಂದಿಗೆ ಸೇರಿ ಅಪಹರಣ ಮಾಡುವ ಸಂಚು ರೂಪಿಸುತ್ತಾನೆ. ಸುಮಾರು ೧೫ ದಿನಗಳಿಂದ ಉದ್ಯಮಿ ಲೋಕೇಶ್ ಎಂಬುವನನ್ನು ಹಿಂಬಾಲಿಸಿ ಆತನ ದಿನಚರಿ, ಅಭ್ಯಾಸಗಳನ್ನು ಗಮನಿಸಿದ್ದಾರೆ. ಅದರಂತೆ ಡಿ. ೬ರಂದು ಹೆರಿಟೇಜ್ ಕ್ಲಬ್ಗೆ ತೆರಳಿದ್ದ ಲೋಕೇಶ್ ವಾಪಾಸ್ ಮನೆಗೆ ತೆರಳುವಾಗ ಸಮಯಕಾದು ಈ ಕೃತ್ಯವೆಸಗಿದ್ದಾರೆ. ಬಂಧಿತ ಪ್ರಮುಖ ಆರೋಪಿ ಸಂತೋಷ್ ಕೇವಲ ಮೂರು ತಿಂಗಳ ಹಿಂದಷ್ಟೇ ಲೋಕೇಶ್ಗೆ ಪರಿಚಯವಾಗಿದ್ದ. ಈ ಪರಿಚಯರಿಂದ ಆತನ ಎಲ್ಲ ವ್ಯವಹಾರಗಳನ್ನು ತಿಳಿದುಕೊಂಡು ಹಕ್ಕಾಗಿ ಕಿಡ್ನಾಪ್ ಪ್ಲಾಸ್ ರಚಿಸಿ, ಸಿಕ್ಕಿಬಿದ್ದಾನೆ.
ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಎಸಿಪಿ ರವಿ ಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಎಸ್.ಡಿ. ಸುರೇಶ್ಕುಮಾರ್, ಸಬ್ ಇನ್ಸ್ಪೆಕ್ಟರ್ಗಳಾದ ಜೈ ಕೀರ್ತಿ ಎಂ, ಆನಂದ್ ಹಾಗೂ ಸಿಬ್ಬಂದಿಗಳಾದ ಶಂಕರ್, ವೆಂಕಟೇಶ್, ಸುನೀಲ್, ಗಂಗಾಧರ್, ಲಿಖಿತ್, ಮಂಜುನಾಥ್, ಲೋಕೇಶ್, ಚಾಲಕ ಗಿರೀಶ್ ಭಾಗವಹಿಸಿದ್ದರು. ಅತೀ ಕಡಿಮೆ ಸಮಯದಲ್ಲಿ ಕಾರ್ಯಚರಣೆ ನಡೆಸಿ ಅಪಹೃತ ವ್ಯಕ್ತಿಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ ತಂಡಕ್ಕೆ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಡಿಸಿಪಿಗಳಾದ ಸುಂದರ ರಾಜ್ ಮತ್ತು ಬಿಂದುಮಣಿ ಅಭಿನಂದಿಸಿದ್ದಾರೆ.


