Online News in ಕನ್ನಡ

ಚಾಮುಂಡಿಬೆಟ್ಟದಲ್ಲಿ ದರ್ಶನ – ಸೇವೆಗಳ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದರ್ಶನ ಮತ್ತು ಸೇವೆಗಳ ಶುಲ್ಕಗಳನ್ನು ಹೆಚ್ಚಳಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಾರ್ವಜನಿಕರು, ದೇವರ ದರ್ಶನದ ಶುಲ್ಕವನ್ನು ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದೆ. ಪ್ರಸಾದದ ಲಡ್ಡುಗಳನ್ನು 15 ರೂ.ಗಳಿಂದ ಏಕಾಏಕಿ 25 ರೂ.ಗಳಿಗೆ ಹೆಚ್ಚಿಸಲಾಗಿದೆ. ಆದರೆ, ಪ್ರಸಾದದ ಗುಣಮಟ್ಟವೂ ಕಳಪೆಯಾಗಿದೆ ಎಂದು ದೂರಿರದರು.
ದೇವಿಯ ದರ್ಶನಕ್ಕೆ ಪ್ರವೇಶ ದರವನ್ನು 30 ರೂ.ಗಳಿಂದ 50 ರೂ.ಗಳಿಗೆ ಹಾಗೂ ವಿಶೇಷ ದರ್ಶನವನ್ನು 100 ರೂ.ಗಳಿಂದ 200 ರೂ.ಗಳಿಗೆ ಹೆಚ್ಚಿಸಿರುವುದು ಭಕ್ತರಿಂದ ಹಗಲು ದರೋಡೆ ಮಾಡಿದಂತ್ತಾಗಿದೆ. ಚಾಮುಂಡಿಬೆಟ್ಟದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡದೆ ಏಕಾಏಕಿ ಎಲ್ಲ ಸೇವೆಗಳ ದರವನ್ನು ಏರಿಸಿರುವುದು ಖಂಡನೀಯ ಎಂದರು.
ಆದ್ದರಿಂದ ಸರಕಾರ ತಕ್ಷಣ ದೇವಿಯ ದರ್ಶನ ಮತ್ತು ಸೇವೆಗಳ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಬರುವ ಭಕ್ತರಿಗೆ ಗುಣಮಟ್ಟದ ಪ್ರಸಾದ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಲೋಕೇಶ್ ಗೌಡ, ಸುರೇಶ್ ಗೋಲ್ಡ್, ಪ್ರಭುಶಂಕರ್, ಕೃಷ್ಣಪ್ಪ, ಹನುಮಂತೇಗೌಡ, ಗಿರೀಶ್, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಢ, ಶಿವಲಿಂಗಯ್ಯ, ನೇಹಾ ಮಂಜುಳಾ, ಮಧುವನ ಚಂದ್ರು, ವರಕೂಡು ಕೃಷ್ಣೇಗೌಡ, ಹೊನ್ನೇಗೌಢ, ಶ್ರೀನಿವಾಸ, ಕುಮಾರ್, ಸುನೀಲ್ ಮೊದಲಾದವರು ಭಾಗವಹಿಸಿದ್ದರು.

Call Now Button