Online News in ಕನ್ನಡ

ಕುವೆಂಪು ʻಉದಯರವಿʼ ನಿವಾಸ ಸ್ಮಾರಕವಾಗಿ ಅಭಿವೃದ್ಧಗೆ ಕನ್ನಡ ಹೋರಾಟಗಾರರ ಒತ್ತಾಯ

ಮೈಸೂರು: ಶ್ರೀ ರಾಮಯಾಣದರ್ಶನಂ ಕೃತಿಯ ಮೂಲಕ ಕನ್ನಡ ಭಾ಼ಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕವಿ ಕುವೆಂಪು ಅವರ ಉದಯರವಿ ನಿವಾಸ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರದ ಕ್ರಮವನ್ನು ಕನ್ನಡ ಸಂಘಟನೆಗಳ ನಿಯೋಗ ತೀವ್ರವಾಗಿ ಖಂಡಿಸಿದೆ.
ಕುವೆಂಪು ಜಗದ ಕವಿ, ಯುಗದ ಕವಿ, ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಈ ನಾಡಿನ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಧೀಮಂತ ಚೇತನ.ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಕುವೆಂಪು ನೀಡಿರುವ ಕೊಡುಗೆ ನಿಜಕ್ಕೂ ಬಣ್ಣಿಸಲು ಅಸಾಧ್ಯ. ಇಂತಹ ನಾಡ ಚೇತನವನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿರುವ ಕ್ರಮ ನಿಜಕ್ಕೂ ನಾಚಿಕೆಪಡುವಂತಹದ್ದು. ಚಾಣಕ್ಯ, ಸಂಸ್ಕೃತ ವಿವಿಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡುವ ಸರಕಾರಕ್ಕೆ ಈ ನಾಡಿಗೆ ಸಾಂಸ್ಕೃತಿಕ ಕೊಡುಗೆ ನೀಡಿದ ಕವಿಯ ಮನೆ ಕಾಣದಿರುವುದು ಬೇಸರದ ಸಂಗತಿ.
ಸರ್ಕಾರ ಈ ಕೂಡಲೇ ಉದಯ ರವಿಯನ್ನು ಸ್ಮಾರಕವನ್ನಾಗಿಸಬೇಕು. ಒಂದು ವೇಳೆ ಸರ್ಕಾರ ಕುವೆಂಪು ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದೆ ಆದರೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿ ಕನ್ನಡಿಗರ ಮನೆಯಿಂದ ಒಂದೊಂದು ರೂಪಾಯಿ ಭೀಕ್ಷೆ ಎತ್ತಿ ಸ್ಮಾರಕವನ್ನು ನಿರ್ಮಿಸುವ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧರಿದ್ದೇವೆ ಎಂದು ಈ ಮೂಲಕ ನಾವು ಸರ್ಕಾರಕ್ಕೆ ತಿಳಿಸಲು ಇಚ್ಛಿಸುತ್ತೇವೆ.
ಉದಯರವಿಗೆ ಭೇಟಿ ನೀಡಿದ ಕನ್ನಡ ಸಂಘಟನೆಗಳ ನಿಯೋಗದಲ್ಲಿ ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ ಕುಮಾರ್ ಗೌಡ, ರಾಜ್ಯಾಧ್ಯಕ್ಷರು ಕರ್ನಾಟಕ ಕಾವಲು ಪಡೆ, ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ, ಎಂ.ಬಿ ನಾಗನಗೌಡ, ಕರುನಾಡು ಸೇವಕರು ಸಂಘಟನೆ ರಾಜ್ಯ ವಕ್ತಾರರು, ಪ್ರಶಾಂತ್ ಗೌಡ, ಶ್ರೇಯಸ್ ಧ್ವನಿ ಎತ್ತಿದ್ದಾರೆ.

Call Now Button