ಮೈಸೂರು: ಬೆಂಗಳೂರು ಕರ್ನಾಟಕ ಪರೀಕ್ಷ ಪ್ರಾಧಿಕಾರ ವತಿಯಿಂದ ಜನವರಿ 25 ರಂದು ಬೆಳಗ್ಗೆ 6 ಗಂಟೆಯಿoದ ಸಂಜೆ 6 ಗಂಟೆಯವರೆಗೆ ಮೈಸೂರು ನಗರದ 29 ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆ/ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬoಧ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಸದರಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಸೆಕ್ಷನ್ 163 ರೀತ್ಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳು: ಡಿ. ಬನುಮಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜು, ನ್ಯೂ ಸಯ್ಯಾಜಿರಾವ್ ರಸ್ತೆ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಅಟೊನೊಮಸ್) ಜೆ.ಎಲ್.ಬಿ ರಸ್ತೆ, ಟೆರಿಷಿಯನ್ ಪದವಿ ಕಾಲೇಜು, ಸಿದ್ದಾರ್ಥನಗರ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಹಳೆ ಡಿಸಿ ಕಛೇರಿ ಹತ್ತಿರ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೆಜ್ಮೆಂಟ್ ಕಾಲೇಜು, ವಾಲ್ಮೀಕಿ ರಸ್ತೆ, ಸೆಂಟ್ ಫಿಲೋಮಿನಾ ಪದವಿ ಕಾಲೇಜು (ಅಟೊನೊಮಸ್) ಬನ್ನಿಮಂಟಪ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ನಿಜಾಮಿಯಾ ಕ್ಯಾಂಪಸ್,
ಬೇಸ್ ಪದವಿ ಪೂರ್ವ ಕಾಲೇಜ್, ಹೆಚ್.ಡಿ.ಕೋಟೆ ರಸ್ತೆ, ರಾಮಕೃಷ್ಣ ವಿದ್ಯಾಕೇಂದ್ರ ಕ್ಯಾಂಪ್, ಪಿ.ಯು ಕಾಲೇಜು ರಾಮಕೃಷ್ಣನಗರ, ಎಸ್.ವಿಐಸಿ ಜ್ಞಾನೋದಯ ಪಿ.ಯು ಕಾಲೇಜು, ಸರಸ್ವತಿಪುರಂ, ಅಧ್ಯಯನ ಪಿ.ಯು ಕಾಲೇಜು ತ್ರಿವೇಣಿ ಸರ್ಕಲ್, ಗೋಪಾಲಸ್ವಾಮಿ ಶಿಶುವಿಹಾರ ಸ್ವತಂತ್ರ ಪಿಯು ಕಾಲೇಜು, ವಿಜಯ ವಿಠಲ ಪಿಯು ಕಾಲೇಜು ಸರಸ್ವತಿಪುರಂ, ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಕುವೆಂಪುನಗರ, ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪಿಯು ಕಾಲೇಜು ಮಾತೃ ಮಂಡಳಿ ಸರ್ಕಲ್ ಒಂಟಿಕೊಪ್ಪಲು, ಶ್ರೀ ನಟರಾಜ ಬಾಲಕಿಯರ ಪಿ.ಯು ಕಾಲೇಜು ಶಂಕರ ಮಠ ರಸ್ತೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಅನಿಕೇತನ ರಸ್ತೆ, ಕುವೆಂಪುನಗರ, ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜು, ಜಯಲಕ್ಷ್ಮೀಪುರಂ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪೀಪಲ್ಸ್ ಪಾರ್ಕ್, ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜು, ಎನ್.ಎಸ್ ರಸ್ತೆ, ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಶೇಷಾದ್ರಿ ಅಯ್ಯರ್ ರಸ್ತೆ, ಮಾತೃಮಂಡಳಿ ಪಿಯು ಕಾಲೇಜು, ವಿ.ವಿ.ಮೊಹಲ್ಲಾ, ಮರಿಮಲ್ಲಪ್ಪ ಪಿ.ಯು. ಕಾಲೇಜು ಸೀತಾವಿಲಾಸ ರಸ್ತೆ, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಜಿಎಲ್ಬಿ ರಸ್ತೆ, ಟೆರಿಷಿಯನ್ ಪಿ.ಯು ಕಾಲೇಜು ಸಿದ್ಧಾರ್ಥನಗರ, ಡಿ. ಬನುಮಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜು, ನ್ಯೂ ಸಯ್ಯಾಜಿರಾವ್ ರಸ್ತೆ, ಸೆಂಟ್ ಫಿಲೋಮಿನಾ ಪಿ.ಯು. ಕಾಲೇಜು, ಬನ್ನಿಮಂಟಪ ಶಾರದ ವಿಲಾಸ ಪದವಿ ಪೂರ್ವ ಕಾಲೇಜು, ಕೃಷ್ಣಮೂರ್ತಿಪುರಂ ಪರೀಕ್ಷ ಕೇಂದ್ರಗಳಾಗಿರುತ್ತವೆ.
ಈ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್/ ಬ್ರೌಸಿಂಗ್ ಸೆಂಟರ್ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್(ಐ.ಪಿ.ಎಸ್) ಅವರು ಪ್ರಕಟಣೆಯಲ್ಲ ತಿಳಿಸಿದ್ದಾರೆ.


