Online News in ಕನ್ನಡ

ಎಲ್ಲ ಸುತ್ತಿ ಬಳಸಿ ಬಂದು ಇಲ್ಲಿಗೇ ಬರೋದಾ ?: ಪತ್ರಕರ್ತರ ಮೇಲೆ ಸಿಕುಕಿದ ಸಿಎಂ

ಹರಿಹರ: ʻ ಬರೀ ಇದ್ಕೆ ಬನ್ನಿ ನೀವು, ಎಲ್ಲ ಸುತ್ತಿ ಬಳಸಿ ಬಂದು ಇಲ್ಲಿಗೇ ಬರೋದು, ಅವರು ಹೇಳಿದ್ರೆ ಅವರಿಗೇ ಕೇಳು ತಮ್ಮ, ಬೇರೆ ಪ್ರಶ್ನೆ ಇದ್ರೆ ಕೇಳಿʼ. ಹೀಗೆ ಪತ್ರಕರ್ತರನ್ನು ಗದರಿಸಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಪ್ರಶ್ನೆ ಕೇಳಿದ ಪತ್ರಕರ್ತರು ಕೊನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ದೆಹಲಿಗೆ ಪ್ರಯಾಣ ಬೆಳೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಪತ್ರಕತರ ಮೇಲೆ ಸಿಡಿಮಿಡಿಗೊಂಡರು.
ಅವರ ಮುಂದೆ ಒಪ್ಪಂದ ಆಗಿದ್ರೆ ಅವರಿಗೆ ಕೇಳಿ, ಸುಮ್ನೆ ಇದ್ಕೇ ಬನಿ, ಸುತ್ತಿ ಬಳಸಿ ಬಂದು ಇಲ್ಲಿಗೇ ಬರೋದಾ ? ಸುಮ್ನೆ ಬೇರೆ ಪ್ರಶ್ನೆ ಇದ್ರೆ ಕೇಳಿ ಎಂದರು. ಇದಕ್ಕು ಮುನ್ನ ಬಜೆಟ್‌ ಸಿದ್ಧತೆ ನಡೆಯುತ್ತಿದೆ. ನಾಳೆ, ನಾಳಿದ್ದು ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಉತ್ತರಿಸಿದರು.
ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸಲು ಬೇಡಿಕೆಯಿದ್ದು ಅದನ್ನು ಪರಿಶೀಲಿಸಿ ಸರ್ಕಾರ ತೀರ್ಮಾನ ಮಾಡಲಿದೆ.
ಮೆಟ್ರೋ ದರ ಹೆಚ್ಚಳಕ್ಕೂ ಸರ್ಕಾರದ ಪಾತ್ರವಿಲ್ಲ. ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ಮೆಟ್ರೋ ಅಧ್ಯಕ್ಷರು ನಿಗದಿ ಮಾಡುತ್ತಾರೆ.
ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದರು.
ಪ್ರಧಾನ ಮಂತ್ರಿಗಳು ಅಮೆರಿಕಾದ ಒತ್ತಡಕ್ಕೆ ಮಣಿದಿದ್ದಾರೆ : ಭಾರತ ಮತ್ತು ಅಮೆರಿಕ ನಡುವೆ ಆಗಿರುವ ಒಪ್ಪಂದದಿಂದ ರೈತರಿಗೆ ಅನ್ಯಾಯವಾಗುತ್ತದೆ. ಪ್ರಧಾನ ಮಂತ್ರಿಗಳು ಅಮೆರಿಕಾದ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿದರು.
ಇನ್ನೆರಡು ಸಚಿವ ಸ್ಥಾನ: ವಾಲ್ಮೀಕಿ ಜನಾಂಗದವರಿಗೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿ ನಾವು ಸಚಿವರನ್ನು ತೆಗೆದುಹಾಕಿಲ್ಲ. ಕಾರಣಾಂತರದಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂತು. ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಪರಿಗಣಿಸಲಾಗುವುದು ಎಂದರು.
ಸತ್ಯಕ್ಕೆ ದೂರವಾದ ಸಂಗತಿ:
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅವರು ರಾಜಿನಾಮೆ ಸಲ್ಲಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು. ಇದೇ ಸಂದರ್ಭ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

Call Now Button