Online News in ಕನ್ನಡ

ಮೈಸೂರಿನಲ್ಲಿ ತಡರಾತ್ರಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಪೆಟ್ರೋಲ್‌ ಬಂಕ್‌ ದರೋಡೆ

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಕರಿಮುದ್ದನಹಳ್ಳಿ ಬಳಿ ಇರುವ ಪೆಟ್ರೋಲ್‌ ಬಂಕ್‌ಗೆ ಬಂದ ಐವರು ದರೋಡೆಕೋರರು ಮಾರಕಾಸ್ತ್ರಗಳನ್ನು ಪ್ರದರ್ಶಿಸಿ, ಹಲ್ಲೆಯನ್ನೂ ನಡೆಸಿ ೧೫,೩೦೦ ರೂ.ಗಳನ್ನು ದರೋಡೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಕಳೆದ ತಡರಾತ್ರಿ ಜರುಗಿದೆ.
ಬಿಳಿಕೆರೆ ಬಳಿಯ ಸ್ವಾಮಿ ಎಂಬುವರ ಪೆಟ್ರೋಲ್‌ ಬಂಕ್‌ ಪೆಟ್ಟೋಲ್‌ ಹಾಕಿಸಿಕೊಳ್ಳುವ ನೆಪದಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ಸ್ಕ್ವಾಡಾ ಕಾರಿನಲ್ಲಿ ಬಂದ್‌ ಐವರು ದುಷ್ಕರ್ಮಿಗಳು ಪೆಟ್ರೋಲ್‌ ಬಂಕ್‌ ಸಿಬ್ಬಂದಿಗಳ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ರೀತಿ ರಾತ್ರಿ ವೇಳೆ ಲಾಂಗುಗಳನ್ನು ಹಿಡಿದು ಪೆಟ್ರೋಲ್‌ ಬಂಕ್‌ಗಳ ದರೋಡೆಗೆ ಇಳಿದಿರುವ ಸಂಗತಿ ಮೈಸೂರು ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದೆ. ಇದೀಗ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ದೌಡಾಯಿಸಿ, ಸಿಸಿ ಕ್ಯಾಮರಾದ ದೃಶ್ಯಗಳನ್ನು ಆದರಿಸಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

Call Now Button