Online News in ಕನ್ನಡ

ಪ್ರವಾಸಕ್ಕೆ ಪತಿ ನಿರಾಕರಣೆ: ಪತ್ನಿ ಆತ್ಮಹತ್ಯೆಗೆ ಶರಣು : ಕುಟುಂಬಸ್ಥರಿಂದ ಶಂಕೆ

ಮೈಸೂರು: ಪ್ರವಾಸ ತೆರಳಲು ಅನುಮತಿ ನಿರಾಕರಿಸಿದರಿಂದ ಮನನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ನಗರದ ಸರಸ್ವತಿಪುರಂ ನಿವಾಸಿ ಸಂಧ್ಯಾ (46) ಎಂಬುವರೇ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಬೆಂಗಳೂರು ಮೂಲದ ಸಂಧ್ಯಾ ಚಾಮರಾಜನಗರ ಮೂಲಕ ರಂಗನಾಥ್‌ ಎಂಬುವರೊಂದಿಗೆ ವಿವಾಹವಾಗಿ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಂಧ್ಯಾ ಅವರು ಪತಿ ಮತ್ತು ಪುತ್ರನೊಂದಿಗೆ ವಾಸವಿದ್ದರು.
ಕಳೆದ ರಾತ್ರಿ ಪ್ರವಾಸಕ್ಕೆ ತೆರಳುವ ವಿಷಯದಲ್ಲಿ ಪತಿಯೊಂದಿಗೆ ಜಗಳವಾಗಿತ್ತು ಎಂದು ಹೇಳಲಾಗಿದೆ. ಆದರೆ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Call Now Button