Online News in ಕನ್ನಡ

ಮೈಸೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ

ಮೈಸೂರು: ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದ ಸ್ನೇಹಮಹಿ ಕೃಷ್ಣನ ಮನೆ ಮತ್ತು ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

 


ಈ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಿ.ಬಿ. ನಟೇಶ್‌ ತನ್ನ ವರ್ಗಾವಣೆಗೆ ಸುಮಾರು ೯ ಕೋಟಿ ರೂ. ಲಂಚ ನೀಡಿದ್ದು, ಇದರಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ೧.೬ ಕೋಟಿ ರೂ. ರವಾನೆಯಾಗಿದೆ ಎಂದು ಆಧಾರ ರಹಿಸ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಅಲ್ಲದೆ, ಕೆಲ ದಿನಗಳ ಹಿಂದೆ ಡಿ.ಬಿ.ನಟೇಶ್‌ ಅವರ ದ್ವನಿ ಎಂದು ಹೇಳಲಾದ ಫೋನ್‌ ಸಂಭಾಷಣೆಯ ತುಣುಕನ್ನೂ ಹಂಚಿಕೊಂಡು ನನಗೆ ಆಮೀಷವೊಡ್ಡಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು. ಯಾವುದೇ ಆಧಾರ ಇಲ್ಲದೆ ತಮ್ಮ ಮೇಲೆ ಲಂಚ ನೀಡಿರುವ ಆರೋಪ ಮಾಡಲಾಗಿದೆ ಎಂದು ಡಿ.ಬಿ. ನಟೇಶ್‌ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನಲ್ಲೆಯಲ್ಲಿ ಇಂದು ಮಧ್ಯಾಹ್ನ ೨.೩೦ರಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಸ್ನೇಹಮಹಿ ಕೃಷ್ಣ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಈತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಡಿದ್ದಾರೆ. ಅಲ್ಲದೆ, ಈತನ ಮನೆ ಮತ್ತು ಕಚೇರಿಯನ್ನು ಜಾಲಾಡಿದ್ದಾರೆ.
ನಮ್ಮ ತಂದೆಗೆ ಅಪಾಯವಿದೆ:
ಸ್ನೇಹಮಯಿ ಕೃಷ್ಣ ಬಂಧನದ ಸುದ್ದಿ ಹರಡುತ್ತಿದ್ದಂತೆಯೆ ಮಾಧ್ಯಮಗಳ ಮುಂದೆ ಬಂದ ಈತನ ಪುತ್ರ ವಿವೇಕ್‌, ನನ್ನ ತಂದೆಯ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಅರೋಪಿಸಿದ್ದಾರೆ. ಈನಡುವೆ, ಸ್ನೇಹಮಹಿ ಕೃಷ್ಣ ಬಂಧನವನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

Call Now Button