ಮನರೇಗಾ ಮರು ಸ್ಥಾಪನೆಗೆ ಆಗ್ರಹಿಸಿ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ
ಹುಣಸೂರು : ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಹೆಸರಿನ ಕಾಯ್ದೆ ಮೂಲಕ ಜಾರಿಗೊಳಿಸಿರುವುದನ್ನು ವಿರೋಧಿಸಿ ಹುಣಸೂರು ಕಾಂಗ್ರೆಸ್ ಸಮಿತಿ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಬೃಹತ್ ಪಾದಯಾತ್ರೆ ನಡೆಸಲಾಯಿತು.
ಹುಣಸೂರು ನಗರದ ಸಂವಿಧಾನ ವೃತ್ತದಿಂದ ತಾಲೂಕು ಕಛೇರಿವರೆಗೆ ಪಾದಯಾತ್ರೆ ನಡೆಸಿ ನರೇಗಾ ಬಚಾವೋ, ವಿಬಿ ಜಿ ರಾಮ್ ಜಿ ಹಠವೋ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ನಡೆ ವಿರುದ್ದ ಆಕ್ರೋಶ ಹೊರಹಾಕಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮಂಜುನಾಥ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2005ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ ಶ್ರಮಿಕರು, ಕೂಲಿ ಕಾರ್ಮಿಕರು ರೈತರಿಗೆ ಅನುಕೂಲತೆ ಕಲ್ಪಿಸಲಾಗಿತ್ತು. ಪ್ರತಿ ಪಂಚಾಯಿತಿಗೆ ವರ್ಷಕ್ಕೆ ₹1 ಕೋಟಿ ವರೆಗೂ ಅನುದಾನ ನೀಡಿ ಸಬಲೀಕರಣಗೊಳಿಸಿತು. ತಮ್ಮ ಭಾಗದಲ್ಲಿ ಆಗಬೇಕಾದ ಕಾಮಗಾರಿಗಳ ಕುರಿತು ಪಂಚಾಯಿತಿ, ಗ್ರಾಮಸಭೆಗಳಲ್ಲಿ ಯೋಜನೆ ತಯಾರಿಸುವ ಅಧಿಕಾರವೂ ಇತ್ತು. ಈಗ ಆ ಅಧಿಕಾರ ಕಿತ್ತುಕೊಂಡು, ಗಾಂಧೀಜಿ ಯವರ ಹೆಸರನ್ನು ತೆಗೆದು ಹಾಕಿ ಆರ್‌ಎಸ್‌ಎಸ್‌ನ ಸೂಚನೆಯಂತೆಯೇ ಬಿಜೆಪಿ ಸರ್ಕಾರ ಯೋಜನೆಯ ಸ್ವರೂಪವನ್ನೇ ಬದಲಾಯಿಸಿದೆ ಎಂದು ಪ್ರತಿಪಾದಿಸಿದರು.
ಗ್ರಾಮ ಪಂಚಾಯಿತಿಗಳ ಅಧಿಕಾರವನ್ನೇ ಕಿತ್ತುಕೊಂಡು ಕೇಂದ್ರ ಸರ್ಕಾರವೇ ಯೋಜನೆ ರೂಪಿಸಲಿದ್ದು, ಇದರಿಂದ ಉದ್ಯೋಗ ಖಾತ್ರಿಯ ಆಶಯವೇ ಹಾಳಾದಂತಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಹರಿಹಾಯ್ದರು.

ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಮಾತನಾಡಿ ನಮ್ಮ ದೇಶದಲ್ಲಿ ಜನಸಾಮಾನ್ಯರು, ಬಡವರು ಬಡವರಾಗಿಯೇ ಇರಬೇಕು, ಸರಿ ಸಮಾನವಾಗಿ ಇರುವುದನ್ನು ಬಿಜೆಪಿಯವರು ಸಹಿಸತ್ತಿಲ್ಲಾ, ಸುಳ್ಳು ಹೇಳೋದ್ರಲ್ಲಿ ಬಿಜೆಪಿ ಪಕ್ಷದವರು 3 ಪಿ ಹೆಚ್ ಡಿ ಮಾಡಿದರೆ ಜೆಡಿಎಸ್ ಪಕ್ಷದವರು 4 ಪಿ ಹೆಚ್ ಡಿ ಮಾಡಿದ್ದಾರೆ ಅಷ್ಟು ವೇಗವಾಗಿ ಸುಳ್ಳು ಹೇಳುತ್ತಿದ್ದಾರೆ. ಹುಣಸೂರು ಪಿರಿಯಪಟ್ಟಣ ತಾಲೂಕು ಸೇರಿದಂತೆ ಕರ್ನಾಟಕದ ತಂಬಾಕು ಉತ್ತಮ ಗುಣಮಟ್ಟದಾಗಿದೆ ಆದರೆ ನರೇಂದ್ರಮೋದಿ ಯವರ ಬಿಜೆಪಿ ಸರ್ಕಾರ ತಂಬಾಕು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಇವರೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರು ಕೂಡ ತಂಬಾಕು ರೈತರ ಸಮಸ್ಯೆಗಳನ್ನು ಬಗೆಹರಿಸದೇ ಕೇವಲ ನೆಪಕ್ಕಾಗಿ ಸಭೆ ನಡೆಸಿ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಾದ ಡಾ ಬಿ ಜೆ ವಿಜಯಕುಮಾರ್, ಹುಣಸೂರು ಉಸ್ತುವಾರಿ ರಾಮಪ್ಪ ಬೋವಿ ಜಿ.ಪಂ.ಮಾಜಿ ಸದಸ್ಯ ಡಿ.ಕೆ ಕುನ್ನೇಗೌಡ, ಕಾಂಗ್ರೇಸ್ ಮಾಜಿ ಕಾರ್ಯಧ್ಯಕ್ಷ ವಕೀಲ ಪುಟ್ಟರಾಜ್ ಮಾತನಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು, ನರೇಗಾ ಮರು ಸ್ಥಾಪಿಸುವವರೆಗೂ ಹೋರಾಟ ಮುಂದುವರಿಸಲಾಗುವುದೆಂದರು.
ಸಭೆಯಲ್ಲಿ ಕಾರ್ಯಧ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಅಧ್ಯಕ್ಷರುಗಳಾದ ರವಿಪ್ರಸನ್ನ, ಪ್ರೇಮ್ ಕುಮಾರ್, ಬಾಲಸುಂದರ್, ಮಾಜಿ ಅಧ್ಯಕ್ಷರುಗಳಾದ ಕಲ್ಕುಣಿಕೆ ರಮೇಶ್, ನಾರಾಯಣ್, ತಾ.ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ವಕ್ಪ್ ಸಮಿತಿ ಸದಸ್ಯ ಅಜ್ಗರ್ ಪಾಷಾ,
ಯುವ ಕಾಂಗ್ರೇಸ್ ಅಧ್ಯಕ್ಷರಾದ ದರ್ಶನ್, ಪೈಜಲ್, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸುನಿತಾಜಯರಾಮೇಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಮಾಜಿ ಸದಸ್ಯ ಚಿಕ್ಕಸ್ವಾಮಿ, ಶಿವಲಿಂಗಪ್ಪ, ಗಾಗೇನಹಳ್ಳಿ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ರಾಮೇಗೌಡ, ಮುಖಂಡರಾದ, ಎ ಪಿ ಸ್ವಾಮಿ, ಬಿ ಎನ್ ಜಯರಾಮ್, ಕುಪ್ಪುಸ್ವಾಮಿ, ಎಸ್ ಜಯರಾಂ, ಉದ್ಯಮಿಗಳಾದ ರಾಜುಶಿವರಾಜೇಗೌಡ, ಟಿ.ಕೃಷ್ಣ, ಡಾ.ಎಚ್ ವಿ ಕಾರ್ತಿಕ್, ಆಪ್ರೋಜ್, ಕುಮಾರ್, ಕಾಂಕ್ರೀಟ್ ರಾಜು, ಜಯಲಕ್ಷ್ಮಿ, ಕಲ್ಪನ, ನೇತ್ರವತಿ, ರೇಖಾಮಣಿ, ರೇಣುಕ, ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.


