ಜನನಿ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕಿಯರಿಗೆ ಗೌರವ ಸಮರ್ಪಣೆ
ಮೈಸೂರು: ʻಯಾವುದೇ ಪುರುಷರು ಸಾಧನೆ ಮಾಡಬೇಕಾದಲ್ಲಿ ಮನೆಯಲ್ಲಿ ಸಹಕಾರ ಬೆಂಬಲ ಸಿಗಬೇಕು. ಇಂದು ನಾನು ಸಹಕಾರಿಯಾಗಿ ನಿಂತಿರುವುದರಿಂದ ನಮ್ಮ ಮನೆಯವರು ಶಾಸಕರಾಗಿದ್ದಾರೆ. ಅವರು ಶಾಸಕರಾಗಿದ್ದಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆʼ ಹೀಗೆಂದು ನುಡಿದರು. ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ಗೌಡ ಅವರ ಪತ್ನಿ ಸಿ.ಗೌರಿ ಕೆ. ಹರೀಶ್ಗೌಡ.

ಮೈಸೂರಿನ ಜನನಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶ್ರೀಮತಿ ಕೆ. ಕಮಲಮ್ಮ ಅವರ 16ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಮಹಿಳೆ ಸಾಧನೆ ಮಾಡುವುದು ಎಷ್ಟು ಮುಖ್ಯವೋ ತನ್ನ ಮನೆ, ಪತಿ ಮತ್ತು ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳುವುದೂ ಸಹ ಅಷ್ಟೇ ಮುಖ್ಯ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಜಾಪ್ರಭಾರ ಮೀಡಿಯಾ ಹೌಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ವಿಭಾವಸು ದೀಪಕ್, ಸಾಮಾಜಿಕ ಸ್ಥಾನಮಾನಕ್ಕೆ ಅರ್ಹಳಲ್ಲ ಎಂದು ಭಾವಿಸಿದ್ದ ಸಮಾಜದಲ್ಲಿ ಇಂದು ಪುರುಷರೇ ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಹಂತಕ್ಕೆ ತಲುಪಿದ್ದೇವೆ. ನಮಗೆ ಸಮಾನತೆ ಬಂದ ಮೇಲೆ ನಮಗಿರುವ ಸವಾಲುಗಳ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಹೊರಗೆ ದುಡಿಯುವ ಮಹಿಳೆ ಮನೆಯನ್ನು ನಿರ್ವಹಣೆ ಮಾಡುವುದು ಹೇಗೆ, ಗಳಿಸಿದ ಹಣವನ್ನು ಉಳಿಸುವುದು ಹೇಗೆ, ಮೊಬೈಲ್ ಯುಗದಲ್ಲಿ ನಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಯೋಜಿಸಬೇಕಿದೆ ಎಂದು ತಿಳಿಸಿದರು.

ಇದಕ್ಕು ಮುನ್ನ ಪೌರಕಾರ್ಮಿಕ ಮಹಿಳೆ ಕೊಲ್ಲಮ್ಮ, ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಎಸ್.ಎಂ. ಸುಜಾತ, ಅಂಗನವಾಡಿ ಕಾರ್ಯಕರ್ತೆ ಡಿ. ಪುಷ್ಪ, ನೀಲಮ್ಮ, ಪವಿತ್ರಾ, ಡಾ. ಚಿತ್ಕಲಾ ಅರುಣ್, ರಶ್ಮಿ ಚಿಕ್ಕಮಗಳೂರು, ತನುಜ ಮಹೇಶ್, ಡಾ. ಸಿರೀಶಾ ಎಸ್.ಕುಮಾರ್, ಕವಿತಾ ಶೆಟ್ಟಿ, ಹೆಚ್.ಕೆ. ಗೀತಾಕುಮಾರ್, ಲತಾ, ಜಯಂತಿ, ಭಾನುಮತಿ, ಕಮಲ ಆನಂದ್, ಕು. ಜಿ.ಎಂ.ಹರ್ಷತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಸುಧಾ ರಮೇಶ್, ಕರೋಡಿ ಎಂ.ಲೋಲಾಕ್ಷಿ ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ಜನನಿ ಸೇವಾ ಟ್ರಸ್ಟ್ನ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಂ.ಕೆ.ಅಶೋಕ್ ಅಧ್ಯಕ್ಷತೆ ವಹಿಸಿದ್ದರು.


