ಬೆಂಗಳೂರು: ಇರಾನ್ ಮತ್ತು ಇಸ್ರೇಲ್ – ಅಮೇರಿಕಾ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ಕಂಡಿದ್ದು, ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ.
ಕಚ್ಛಾ ತೈಲ ಬಲೆ ಏರಿಕೆಯ ಹಿನ್ನಲ್ಲೆಯಲ್ಲಿ ರೂಪಾಯಿ ಮೌಲ್ಯವು ಇಂದು ಡಾಲರ್ ಎದುರು 93.20ಗೆ ಕುಸಿತ ಕಂಡಿದೆ. ಇದು ದಾಖಲೆಯ ಸರ್ವಕಾಲಿಕ ಕುಸಿತವಾಗಿದೆ. ಇದೀಗ ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ತಮ್ಮ ಹಣ ವಾಪಸ್ ಪಡೆದು ಡಾಲರ್ ಮೇಲೆ ಹೂಡುತ್ತಿದ್ದಾರೆ.
ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶದಲ್ಲಿ ಸರಕು ಸಾಗಾಣಿಕೆ ವೆಚ್ಚ, ಪೆಟ್ರೋಲ್ – ಡಿಸೆಲ್ ವೆಚ್ಚ ಮತ್ತು ದಿನ ನಿತ್ಯ ಬಳಸುವ ವಸ್ತುಗಳ ಮೇಲೆ ಬೆಲೆ ಏರಿಕೆಯಾಗಲಿದ್ದು ಭಾರತದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕುವ ಎಲ್ಲ ಸಾಧ್ಯತೆಗಳಿದೆ. ಈ ಬೆಳವಣಿಗೆ ಕೈಗಾರಿಕಾ ಕ್ಷೇತ್ರದ ಮೇಲೂ ಬೀರಲಿದ್ದು, ಆರ್ಬಿಐನ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿಸಿದೆ.


