Online News in ಕನ್ನಡ

ಮೈಸೂರು ಜಿಲ್ಲೆಯಲ್ಲಿ ಭಾರೀ ಡ್ರಗ್ಸ್‌ ದಾಸ್ತಾನು ಪತ್ತೆ: ಇಬ್ಬರ ಬಂಧನ

ಮೈಸೂರು: ಒಂಡೆದೆ ಪೊಲೀಸ್‌ ಇಲಾಖೆ ಡ್ರಗ್ಸ್‌ ಮಾಫಿಯಾ ವಿರುದ್ಧ ʻವಿಮುಕ್ತʼ ಜಾಗೃತಿಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬಗೆದಷ್ಟೂ ಡ್ರಗ್ಸ್‌ ಜಾಲ ಬಯಲಾಗುತ್ತಿದೆ.
ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವ ದಾಸನಪುರ ಗ್ರಾಮದ ಪಕ್ಕದಲ್ಲಿರುವ ಆಸ್ಪತ್ರೆ ಕಾವಲ್‌ನ ಜಮೀನು ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಸುಮಾರು ೪೮ ಕೆಜಿ ತೂಕದ ಡ್ರಗ್ಸ್‌ ಪದಾರ್ಥಗಳು ಪತ್ತೆಯಾಗಿದ್ದು ಇದರ ಮೊತ್ತ ೧೨ ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.
ಈ ಸಂಬಂದ ಮೈಸೂರು ನಗರದ ಸಿದ್ದಿಖಿ ಮೊಹಲ್ಲಾದ ನಿವಾಸಿ ೩೦ ವರ್ಷದ ಮೊಹಮ್ಮದ್‌ ಇರ್ಫಾನ್‌ ಹಾಗೂ ಹುಣಸೂರು ಪಟ್ಟಣದ ರೆಹಮತ್‌ ಮೊಹಲ್ಲಾ ನಿವಾಸಿ ೪೨ ವರ್ಷದ ಮೊಹಮ್ಮದ್‌ ಇರ್ಫಾನ್‌ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ೫.೩೦ರಲ್ಲಿ ಪೊಲೀಸರಿಗೆ ದೊರಕಿದ ಖಚಿತ ಮಾಹಿತಿ ಆಧರಿಸಿ ಹುಣಸೂರು ಗ್ರಾಮಾಂತರ ಉಪ ವಿಭಾಗದ ಪೊಲೀಸ್‌ ಅಧಿಕಾರಿಗಳು ದಾಸನಪುರ ಗ್ರಾಮಕ್ಕೆ ತೆರಳಿ ಡ್ರಗ್ಸ್‌ ಕಚ್ಛಾ ವಸ್ತುಗಳನ್ನು ದಾಸ್ತಾನು ಮಾಡಿದ್ದ ಶೆಡ್‌ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ೭.೩೫ ಕೆಜಿ ಮೆಫೆಡ್ರಾನ್‌ ಮತ್ತು ೪೧ ಕೆಜೆ ತೂಕದ ಪ್ರೆಜರೋಸ್‌ ಸೇರಿದಂತೆ ೪೮ ಕೆಜಿ ತೂಕದ ಡ್ರಗ್ಸ್‌ ಪದಾರ್ಥ ಪತ್ತೆಯಾಗಿದೆ.
ಡ್ರಗ್ಸ್‌ ಜಾಲದ ಬೆನ್ನಟ್ಟಿರುವ ಪೊಲೀಸರು ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಬೇಟೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಪ್ರಕರಣ ದಾಕಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

Call Now Button