ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ದೊಡ್ಡ ಜಾತ್ರೆಯ ಅಂಗವಾಗಿ ಇಂದು ಜರುಗಿದ ರಥೋತ್ಸವದ ವೇಳೆ ಭಕ್ತರೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರನ್ನು ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಅಗ್ರಹಾರ ಬೀದಿಯ ನಿವಾಸಿ ಬಿ.ಜಿ. ನಾಗರಾಜ ಗುಪ್ತ ಎಂಬುವರ ಪುತ್ರ ಬಿ.ಎನ್. ನಂಜುಂಡಸ್ವಾಮಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ 58 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಜನ ಕಾಲ್ತುಳಿತದಿಂದ ಈ ವ್ಯಕ್ತ ಮೃತಪಟ್ಟಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ರವಾನಿಸಿದ್ದರು.

ರಥೋತ್ಸವದ ವೇಳೆ ನೆಲಕ್ಕೆ ಕುಸಿದು ಬಿದ್ದ ವ್ಯಕ್ತಿಯನ್ನು ಸಹಭಕ್ತರು ಮೇಲೆತ್ತಿ ನೀರು ಕುಡಿಸಿ ರಕ್ಷಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂಜುಂಡೇಶ್ವರನ ಸನ್ನಿಧಿಯಲ್ಲಿಯೇ ನಂಜುಂಡಸ್ವಾಮಿ ಕೊನೆಯುಸಿರೆಳೆದಿದ್ದಾರೆ.


