ಮೈಸೂರು: ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಎಸ್.ಚಿಕ್ಕಮಾದು ಅಭಿಮಾನಿಗಳ ಬಳಗದ ವತಿಯಿಂದ ಆಗ್ರಹಿಸಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಜೂನ್ ೧೨ (ಶುಕ್ರವಾರ)ರಂದು ನಗರದ ಪುರಭವನದ ಮುಂಭಾಗ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಇಂದು ಶಾಸಕ ಅನಿಲ್ ಚಿಕ್ಕಮಾದು ಅವರ ನಿವಾಸದಲ್ಲಿ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿದ ಅಭಿಮಾನಿಗಳು, ಈ ಭಾಗದಲ್ಲಿ ಕಳೆದ ೨೫ ವರ್ಷಗಳಿಂದ ನಾಯಕ ಸಮುದಾತಯಕ್ಕೆ ಸಚಿವ ಸ್ಥಾನ ದೊರಕಿಲ್ಲ. ಈ ಬಾರಿ ನಾಯಕ ಸಮುದಾಯದ ಶೇ. ೭೦ರಷ್ಟು ಮಂದಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಆದ್ದರಿಂದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕು ಮುನ್ನ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ನಮ್ಮ ತಂದೆ (ಚಿಕ್ಕಮಾದು) ೪೦ ವರ್ಷಗಳ ಹೋರಾಟದಲ್ಲಿ ಒಂದೇ ಒಂದು ಕಪ್ಪು ಚಿಕ್ಕೆ ಇಲ್ಲದಂತೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ದೊರಕಿದ ಅವಕಾಶದಲ್ಲಿ ದೀನ ದಲಿತರ ಪರವಾದ ಕೆಲಸ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮೈಸೂರು ಮಾತ್ರವಲ್ಲದೆ, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಅವರದ್ದೇ ಕೊಡುಗೆ ಇದೆ. ಇಂದು ನಮ್ಮ ತಂದೆಯ ಹೆಸರಿನಲ್ಲಿ ಅಭಿಮಾನ ಸಂಘ ಸ್ಥಾಪಿಸಿರುವುದು ಹರ್ಷದ ಸಂಗತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಕ್ಯಾತನಹಳ್ಳಿ ನಾಗರಾಜು ಗೌರವಾಧ್ಯಕ್ಷರು ಪಾಳ್ಯ ಕೃಷ್ಣ, ಹೊನ್ನನಾಯಕರು, ದೊರೆಸ್ವಾಮಿನಾಯಕ, ಮೈಮುಲ್ ಅಧ್ಯಕ್ಷ. ಕೆ ಈರೇಗೌಡ, ಸಂಘದ ಉಪಾಧ್ಯಕ್ಷರು ಎಂ ದೇವರಾಜು. ನಾಗವಾಲ ಮಹೇಶ್. ವರುಣ ಚಂದ್ರು. ಖಜಾಂಚಿ ಜೆ ಶ್ರೀನಿವಾಸನಾಯಕ, ಕಾರ್ಯದರ್ಶಿ ಕೆಎನ್ ಮಹೇಶನಾಯಕ,. ಕಲ್ಕುಣಿಕೆ ರವಿ. ತಿಪ್ಪೂರು ಮಹಾದೇವ್. ಸಾಲಿಗ್ರಾಮ ಮಹದೇವ ನಾಯಕ, ಸಲಹೆಗಾರರು ಲಿಂಗರಾಜು ಎನ್ ಬೆಳತ್ತೂರು. ಯಳಂದೂರು ಜಗದೀಶ ನಾಯಕರು, ನಿರ್ದೇಶಕರು ಆಗತ್ತೂರು ಅಂಕನಾಯಕ, ಬಿಪಿ ಸಿದ್ದನಾಯಕ, ಇಟ್ನಾ ಬೆಟ್ಟನಾಯಕ, ಧನಗಳ್ಳಿ ನಿಂಗರಾಜು,ಮರಸೆ ಸಿದ್ದರಾಜು. ಇಲವಾಲ ಕೃಷ್ಣ, ಶೇಖರ್ ಸುಳ್ಳಣದಕೇರಿ, ಹುಣಸೂರು ವೆಂಕಟೇಶ ನಾಯಕ, ಕಾಟೂರು ಸಿದ್ದರಾಜು, ಶ್ರೀರಂಗರಾಜಪುರ ಕುಮಾರ್, ಬೈರನಾಯಕ. ಹುತ್ತೂರು ಲೋಕೇಶ್ ,ಸಮಾಜದ ಮುಖಂಡರು ಪುರದಕಟ್ಟೆ ಬಸವರಾಜು, ಹುಣಸೂರು ವೆಂಕಟೇಶನಾಯಕ, ಸರಗೂರು ಶ್ರೀನಿವಾಸ,ಇಟ್ನಾ ರಾಮನಾಯಕ.ದೊಡ್ಡವೀರನಾಯಕ,ಬಿದರಳ್ಳಿ ರಾಜು ಪರಿಶಿಷ್ಟ ಜಾತಿ ವರ್ಗದ ಜಿಲ್ಲಾ ಸಮಿತಿ ಸದಸ್ಯರು ವೇಣು, ಕೆಟಿ ಚಿಕ್ಕನಾಯಕ, ಹೆಬ್ಬಲಗುಪ್ಪೆ ಚಿಕ್ಕನಾಯಕ,ನಾಗರಾಜು, ಹೊಮ್ಮರಗಳ್ಳಿ ವೆಂಕಟೇಶ್, ಗೋಪಾಲ. ರಾಜೇಂದ್ರ,ಗುಂಡ್ಲುಪೇಟೆ ಮಮಣಿಕಂಠ, ರವಿಶಂಕರ, ಟಿಎಲ್ ಸ್ವಾಮಿ, ಸಿಂಡಿಕೇಟ್ ಸದಸ್ಯರು ಮಹದೇಶ್, ಡಾ,ನಟರಾಜು ಶಿವಣ್ಣ. ಕ್ಯಾತನಹಳ್ಳಿ ಜಿ.ಗೋವಿಂದರಾಜು, ಕೆಪಿ ಚೆಲುವರಾಜು,ಎಸ್,ಶಿವರಾಜು, ಪ್ರಸನ್ನ ಕುಮಾರ್, ಮಡಿವಾಳ ಬೀರೇಶ,ಲಾಯರ್ ಶಿವರಾಜ್, ಕೆ ಎನ್ ಕುಮಾರ್. ಶಿಂಡೇನಹಳ್ಳಿ ಗಿರೀಶ್. ರವಿ ಮರಿದೇವಯ್ಯ ಶಶಿ. ಕೃಷ್ಣ, ಸಣ್ಣನಿಂಗೇಗೌಡ, ಬೆಟ್ಟದಬೀಡು ಗಣೇಶ್. ಮುಂತಾದವರು ಇದ್ದರು.


