Online News in ಕನ್ನಡ

ಬಿಜೆಪಿಗರು ರಣಹದ್ದುಗಳು…ಕೋಮುಗಲಭೆ ಜನಕರು…: ಮೈಸೂರಿನಲ್ಲಿ ಜಿಲ್ಲಾ ಮಂತ್ರಿ ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಗಣೇಶ ಹಬ್ಬ ಆಚರಣೆ ಬಗ್ಗೆ ಯುವಕರಲ್ಲಿ ಕಾನೂನು ನಿಯಮ ಬೋಧಿಸಿದ ಟಿ.ನರಸೀಪುರ ಪೊಲೀಸ್‌ ಇನ್ಸ್‌ಪೆಕ್ಟರ್‌ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಬಿಜೆಪಿ ನಾಯಕರು ರಣ ಹದ್ದುಗಳು ಅವರು ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಎಬ್ಬಿಸಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇನ್ಸ್‌ಪೆಕ್ಟರ್‌ ನೀಡಿರುವ ಸಲಹೆಗಳಲ್ಲಿ ಏನೂ ತಪ್ಪಿಲ್ಲ. ಅವರ ಪೂರ್ಣ ವಿಡಿಯೋ ನೋಡಿದಾಗ ಅವರು ಅನೇಕ ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ಆದರೆ, ಒಂದೇ ಒಂದು ವಿಷುಯವನ್ನು ಮುಂದಿಟ್ಟುಕೊಂಡು ಹಿಂದೂ ವಿರೋಧಿ ಹೇಳಿಕೆ ಎಂದು ತಿರುಚುವ ಪ್ರಯತ್ನ ನಡೆದಿದೆ ಎಂದು ಇನ್ಸ್‌ಪೆಕ್ಟರ್‌ ನಿಲುವನ್ನು ಬಲವಾದಿ ಸಮರ್ಥಿಸಿಕೊಂಡರು.

ಬಿಜೆಪಿಗರು ಒಂದು ರೀತಿ ರಣ ಹದ್ದುಗಳು ಇದ್ದಂತೆ. ಹಿಂದುತ್ವದ ಹೆಸರಿನಲ್ಲಿ ಕೋಮು ಗಲಭೆ ಎಬ್ಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಅಮ್ಮನ ಆಸೆಯಂತೆ ಎಲ್ಲ ನೆರವೇರಿದೆ…:

ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೂತನ ಮನೆಯ ಗೃಹ ಪ್ರವೇಶ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಮೈಸೂರಿನಲ್ಲಿ ಎರಡು ಮನೆಗಳು ಇತ್ತು. ಕಾರಣಾಂತರಗಳಿಂದ ಅದನ್ನು ಮಾರಬೇಕಾಯಿತು. ಆದರೆ, ಅಮ್ಮನ ಆಸೆಯಂತೆ ಮೈಸೂರು ನಗರದಲ್ಲೇ ಮನೆ ಕಟ್ಟಬೇಕೆಂದುಕೊಂಡಿದ್ದೆವು. ಈಗ ಕಟ್ಟಿಯಾಗಿದೆ. ಅಮ್ಮನ ಆಸೆಯಂತೆ ಗೃಹ ಪ್ರವೇಶವೂ ಆಗಿದೆ. ಅಪ್ಪ (ಸಿದ್ದರಾಮಯ್ಯ) ಆಗಾಗ ಬಂದು ಹೋಗುತ್ತಾರೆ ಎಂದು ನುಡಿದರು.

 

Call Now Button