Online News in ಕನ್ನಡ

ಎಐ ಸಮಾಜವನ್ನು ಧಿಕ್ಕುತಪ್ಪಿಸುತ್ತಿದೆ : ಕಾಂಗ್ರೆಸ್‌ ರಾಜ್ಯ ವಕ್ತಾರ ಎಂ.ಲಕ್ಷ್ಮಣ್‌ ಕಳವಳ

ಮೈಸೂರು: ಎಐ ತಂತ್ರಜ್ಞಾನವು ಸಮಾಜವನ್ನು ಧಿಕ್ಕು ತಪ್ಪಿಸುತ್ತಿದ್ದು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುವುದೇ ಪೋಷಕರಲ್ಲಿ ದೊಡ್ಡ ಗೊಂದಲವಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ತಿಳಿಸಿದ್ದಾರೆ.
ಮೈಸೂರಿನ ಪೊಲೀಸ್‌ ಲೇಔಟ್‌ 2ನೇ ಹಂತದಲ್ಲಿರುವ ಶ್ರೀ ಲಕ್ಷ್ಮೀ ಶಿಶು ವಿಹಾರದ 4ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆ ಮುಂದೆ ಸಾಕೋ ನಾಯಿಯನ್ನೂ ರೋಬೋಟ್‌ ನಾಯಿಗಳನ್ನು ತಂದಿಡುವ ಕಾಲ ಬಂದಿದ್ದು ಜಗತ್ತು ಎತ್ತ ಸಾಗಲಿದೆ ಎಂಬುವುದೇ ದೊಡ್ಡ ಗೊಂದಲವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಇಂದು ದುಡಿಯುತ್ತಿರುವ ಜನರ ಪೈಕಿ ಶೇ. 70ರಷ್ಟು ಜನ ಉದ್ಯೋಗವನ್ನು ಕಳೆದುಕೊಳ್ಳುವ ಆತಂಕ ಇದೆ. ಹಿಂದೆ ನಾವೆಲ್ಲ ಹಳ್ಳಿಯಲ್ಲಿ ಓದಿದವರು, ನಮಗೊಂದು ಧ್ಯೇಯ, ಕನಸು ಇತ್ತು. ಇಂದು ಮಕ್ಕಳಿಗೆ ಕನಸು ಕಾಣುವ ಅವಕಾಶವೂ ದೊರಕುತ್ತಿಲ್ಲ. ಮಕ್ಕಳಿಗೆ ಏನು ಓದಿಸಬೇಕು ಎಂಬುವುದೇ ಗೊಂದಲದೆ. ಕೆಲಸದ ವಿಚಾರದಲ್ಲಂತ್ತೂ ಯಾವುದೇ ಗ್ಯಾರಂಟಿ ಇಲ್ಲದಂತ್ತಾಗಿದೆ ಎಂದರು.
ವಿಜಯಕಾಲ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ವಿಭಾವಸು ಕೆ.ಆರ್.‌ ಮಾತನಾಡಿ, ಮಕ್ಕಳನ್ನು ಸದಾ ಚಟುವಟಿಕೆಯಲ್ಲಿ ಇಡುವ ಭ್ರಮೆಯಲ್ಲಿ ಅವರಲ್ಲಿರುವ ಸೃಜನಶೀಲನೆಯನ್ನು ಕಸಿದುಕೊಳ್ಳುತ್ತಿದ್ದೇವೆ. ಮಕ್ಕಳನ್ನು ಅವರಪಾಡಿಗೆ ಬಿಟ್ಟು ಅವರಲ್ಲಿಯೆ ಹೊಸ ಚಿಂತನೆಗಳನ್ನು ಮೂಡುವಂತೆ ಮಾಡಲು ಸಾಧ್ಯವಾಗುತ್ತಿಲ್ಲ. ಶಾಲೆ ಒಳಗೂ ಪೂರ್ಣ ಚಟುವಟಿಕೆ, ಮನೆಯಲ್ಲೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಕ್ಕಳೊಳಗಿರುವ ಸೃಜನಶೀಲನೆಯನ್ನು ಗುರುತಿಸಲಾಗುತ್ತಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಲನಹಳ್ಳಿ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಸ್ವರ್ಣ ಜಿ.ಎಸ್.‌, ಡಾ. ಸ್ಪೂರ್ತಿ ಹೆಚ್.ಕೆ., ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವರಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀಲಕ್ಷ್ಮೀ ಮತ್ತು ಮಕ್ಕಳು ಪೋಷಕರು ಉಪಸ್ಥಿತರಿದ್ದರು. ಕಾಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿತ್ತು.

Call Now Button