Online News in ಕನ್ನಡ

ಭಾರತದ ಸಂವಿಧಾನದಲ್ಲಿ ಬಸವ ತತ್ವ ಅಡಗಿದೆ

ಮೈಸೂರು: ಭಾರತದ ಸಂವಿಧಾನ ಕೇವಲ ಕಾನೂನು ಕಾಯ್ದೆಗಳ ಪುಸ್ತಕವಲ್ಲ. ಅದರಲ್ಲಿ ಬಸವಾದಿ ಶರಣರ ಸಮಸಮಾಜ ನಿರ್ಮಾಣದ ಆಶಯ ಅಡಗಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.

ಮೈಸೂರು ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕೊಡ ಮಾಡಿದ ‘ ಬಸವ ಭೂಷಣ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಬುದ್ಧ, ಬಸವ, ಡಾ. ಅಂಬೇಡ್ಕರ್ ಅವರ ಭಾವನೆ ಅಡಕವಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ಶಾಲೆಯಲ್ಲಿ ದಲಿತ ಮಹಿಳೆ ಬಿಸಿಯೂಟ ತಯಾರಿಸುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ಶಾಲೆಯಿಂದ ಬಿಡಿಸಿದ ಪ್ರಸಂಗ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತ್ತದ್ದು, ಬಸವಣ್ಣನ ನಾಡಿನಲ್ಲಿ ಇಂದಿಗೂ ಜಾತಿಯತೆ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ. ಈ ಘಟನೆ 12ನೇ ಶತಮಾನದಲ್ಲಿ ಸಮ ಸಮಾಜಕ್ಕೆ ಹೋರಾಡಿದ ಬಸವಣ್ಣನಿಗೆ ಮಾಡಿದ ಅವಮಾನ ಎಂದರು.

ಜೆಎಸ್ಎಸ್ ಸಂಸ್ಕೃತ ಕಾಲೇಜಿನ ಡಾ. ಸುನಂದ ಭೂಪಾಳಿ ಮಾತನಾಡಿ, 12ನೇ ಶತಮಾನದಲ್ಲಿ ಸಂಸತ್ತಿನ ವ್ಯವಸ್ಥೆ ಜಾರಿಗೆ ತಂದು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿದು ಎಲ್ಲ ಜಾತಿ, ವರ್ಗಕ್ಕೆ ಪ್ರತಿನಿದ್ಯ ಕಲ್ಪಿಸಿ ಮಹಾನ್ ಸಮಾಜ ಸುಧಾರಕ ಬಸವಣ್ಣ ಎಂದು ತಿಳಿಸಿದರು.

ಇದೇ ಸಂಸರ್ಭಸಲ್ಲಿ ಮಾಧ್ಯಮ ಕ್ಷೇತ್ರದಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಚ ಕೆ.ದೀಪಕ್, ಕೃಷಿ ಕ್ಷೇತ್ರದಿಂದ ಬಂದಿಗೆಗೌಡ, ಯೋಗ ದೈಹಿಕ ಶಿಕ್ಷಣ ಕ್ಷೇತ್ರದಿಂದ ಮಲ್ಲರಾಜೇ ಅರಸ್, ಸಾರ್ವಜನಿಕ ಕ್ಷೇತ್ರದಿಂದ ಗೋಪಾಲ್, ಜಾನಪದ ಕ್ಷೇತ್ರದಿಂದ ಆರ್.ಕೆ. ಸ್ವಾಮಿ, ಶಿಕ್ಷಣ ಕ್ಷೇತ್ರದಿಂದ ಪ್ರಸನ್ನ ಮೋಹನ್ ಮಡಿವಾಳ ಅವರಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಂದ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ. ನಟರಾಜ್ ಜೋಯಿಸ್ ಉದ್ಘಾಟಿಸಿದರು. ವೇದಿಕೆಯಲ್ಲಿ ಲ. ಗೋಲ್ಡನ್ ಸುರೇಶ್, ಅಂಬಳೆ ಶಿವಣ್ಣ, ಸಂಸ್ಥೆಯ ಬಸವರಾಜೇಂದ್ರ ಸ್ವಾಮಿ ಹಾಜರಿದ್ದರು.

 

Call Now Button