ಮುಂಬೈ: ಬಾಲಿವುಡ್ನ ಹಿರಿಯ ನಟ ಧಮೇಂದ್ರ ಅವರು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಪೀಡಿತರಾಗಿ ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನವೆಂಬರ್ 12ರಂದು ಮನೆಗೆ ಹಿಂದಿರುಗಿದ್ದ ಧಮೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿಲ್ಲ. ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಕಾಲ ಬಾಲಿಪುಡ್ನ ಸ್ಟಾರ್ ಆಗಿ ವಿಜೃಂಭಿಸಿದ ಹಿರಿಯ ನಟ ಧಮೇಂದ್ರ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಸಿನಿಮಗಳಾಗಿತ್ತು. ಶೋಲೆ, ಚುಪ್ಕೆ ಚುಪ್ಕೆ, ಸತ್ಯಕಂ, ಸೀತಾ ಔರ್ ಗೀತಾ, ಯಾದೋಂಕಿ ಭಾರತ್, ಡ್ರೀಮ್ ಗರ್ಲ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮೇ ಪ್ಯಾರ್ ಕಿಯಾ ಪಿರ್ಸೆ… ಹೀಗೆ ಅನೇಕ ಮರೆಯಲಾರದ ಸಿನಿಮಗಳಲ್ಲಿ ನಟಿಸುವ ಮೂಲಕ ಬಾಲಿವುಡ್ನ ಹೀ ಮ್ಯಾನ್ ಎಂದೇ ಖ್ಯಾತರಾಗಿದ್ದರು. ಪತ್ನಿ ಹೇಮಮಾಲಿನಿ ಸೇರಿದಂತೆ ಅಪಾರ ಬಂಧುಮಿತ್ರರು, ಅಭಿಮಾನಿ ವರ್ಗವನ್ನು ಧಮೇಂದ್ರ ಅಗಲಿದ್ದಾರೆ.


