Online News in ಕನ್ನಡ

ಸಿಸಿಬಿ ಪೊಲೀಸ್‌ ಕಾರ್ಯಾಚರಣೆ: ನಾಲ್ವರ ಬಂಧನ, ಮಾದಕ ವಸ್ತುಗಳ ವಶ

ಮೈಸೂರು: ಮಾದಕ ವ್ಯಸನ ಮುಕ್ತ ಮೈಸೂರು ʻವಿಮುಕ್ತಿʼ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು 8.6 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು, 5 ಕೆಜಿ ಗಾಂಜಾ ಮತ್ತು ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅಮ್ಜದ್‌ ಷಾಷ, ಜಿಯಾ ಖಾನ್‌, ಮಹಮ್ಮದ್‌ ಸಕ್ಲೈನ್‌ ಮತ್ತು ಸೈಯದ್‌ ಬೇಗ್‌ ಎಂಬುವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್‌ ಕಾರನ್ನು ತಪಾಸಣೆಗೆ ಒಳಪಡಿಸಿದಾಗ ಈ ಪ್ರಕರಣ ಪತ್ತೆಯಾಗಿದೆ.
ಕಾರ್ಯಾಚರಣೆಯಯಲ್ಲಿ ಸಿಸಿಬಿ ಎಸಿಪಿ ಮಹಮ್ಮದ್‌ ಶರೀಫ್‌ ರಾವುತರ್‌, ಇನ್ಸ್‌ಪೆಕ್ಟರ್‌ ಶಬ್ಬೀರ್‌ ಹುಸೇನ್‌, ಪಿಎಸ್‌ಐಗಳಾದ ಲೇಪಾಕ್ಷ, ಜೋತ್ಸ್ನಾರಾಜ್‌, ರೇವಣ ಸಿದ್ದಪ್ಪ, ಅನಿಲ್‌ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Call Now Button