ಮೈಸೂರು: ಮೈಸೂರಿನ ಗುರುದೇವ ಅಕಾಡೆಮಿ ಆಫ್ ಫೈನ್ ಆಟ್ರ್ಸ್ ಪ್ರಸ್ತುತ ಪಡಿಸುವ `ಚೇತನೋತ್ಸವ-2026′ ಭರತನಾಟ್ಯ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಜನವರಿ 24 (ಶನಿವಾರ)ರಂದು ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಕಲಾ ನಿರ್ದೇಶಕಿ ಡಾ. ಚೇತನಾ ರಾಧಾಕೃಷ್ಣ ಪಿ.ಎಂ. ತಿಳಿಸಿದರು.
ಈ ಸಂಬಂಧ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3.30ರಿಂದ ಸಂಜೆ 7.30ರವರೆಗೆ ಶಾಸ್ತ್ರೀಯ ನೃತ್ಯ ಪ್ರದರ್ಶನ, ಗುರುದೇವ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಲಿದೆ ಎಂದು ತಿಳಿಸಿದರು.

ಮಧ್ಯಾನ 3.30ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಕಲಾವಿದರಿಂದ ಭರತನಾಟ್ಯ ಸಂಜೆ 4.30ರಿಂದ 5.30ರವರೆಗೆ ಗುರುದೇವ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನವಿರುತ್ತದೆ. ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮವನ್ನು ಕಲಾ ಪೋಷಕರಾದ ಡಾ. ಎಂ.ಜಗನ್ನಾಥ್ ಶೆಣೈ ಉದ್ಘಾಟಿಸಲಿದ್ದು, ವಿಜನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಡಾ.ಎನ್. ಶ್ರೀನಿವಾಸ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಸ್ವಾಮಿ, ವಕೀಲರಾದ ವಿಶ್ವನಾಥ್ ದೇವಸ್ಯ, ಕಲಾ ಪೋಷಕ ಅಚ್ಯುತ ರಾಮಪ್ರಸಾ ಕಾಮತ್ ಅವರು ಗುರುದೇವ ಪ್ರಶಸ್ತಿ ಪ್ರದಾನ ಮಾಡುವರು.

ಪ್ರತಿಭಾ ಪುರಸ್ಕಾರ ಜೂನಿಯರ್ ವಿಭಾಗದಲ್ಲಿ ವಿಶ್ರುತ ಎಸ್. ಚಡಗ, ಗೌರಿ ಹರ್ಷ ಹೆಗಡೆ, ಪುರ್ವಿ ಕಲ್ಯಾಣಿ, ಜಯಶ್ರೀ ಶ್ರೀಹರಿದ್ರ ಎಸ್, ಪರೀಕ್ಷಿತ ಜೆ ಹಾಗೂ ಸೀನಿಯರ್ ವಿಭಾಗದಲ್ಲಿ ತಪಸ್ವಿ ವರ್ಧನ್, ದೇವಿಕಾ ಎಸ್. ಪ್ರೀ ವಿದ್ವತ್ ವಿಭಾಗದಲ್ಲಿ ದಿಶಾ ನಾಯರ್, ಮೈತ್ರಿ ಮಹಿರಾಮ್, ವಿದ್ವತ್ ವಿಭಾಗದಲ್ಲಿ ಭಾಗ್ಯಲಕ್ಷ್ಮಿ ಅವರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ನಿರ್ದೇಶಕ ಪಿ.ಎಂ. ರಾಧಾಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ವಾಗತ ಗ್ರಂಥಪಾಲಕರಾದ ಗಾಯತ್ರಿ ಹಾಜರಿದ್ದರು.


