ಬೆಂಗಳೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರು ಮಾನಸಿಕ ಖಿನ್ನತೆಗೆ ಒಳಗಾಡಿದ್ದರು ಎಂಬ ಅಂಶವನ್ನು ವಿಶೇಷ ತನಿಖಾ ತಂಡದ ಮೂಲಗಳು ತಿಳಿಸಿವೆ. ರಾಯ್ ಆತ್ಮಹತ್ಯೆಗೆ ಶರಣಾಗುವ ಮುನ್ನಾ ದಿನ ಮನೋವೈದ್ಯರಿಂದ ಕೌನ್ಸಲಿಂಗ್‌ಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಕಳೆದ ಮೂರು ದಿನಗಳ ಹಿಂದೆ ತಮ್ಮ ಬೆಂಗಳೂರಿನ ಕಚೇರಿಯಲ್ಲಿ ಕೋಟ್ಯಾಧಿಪತಿ, ಉದ್ಯಮಿ, ಸಿ.ಜೆ. ರಾಯ್ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಾಗ, ಐಟಿ ದಾಳಿ ಮತ್ತು ಐಟಿ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರಕರಣದ ತಣಿಕಗೆ ರಾಜ್ಯ ಸರಕಾರ ಎಸ್‌ಐಟಿ ರಚಿಸಿದ ಹಿನ್ನಲ್ಲೆಯಲ್ಲಿ ವಿಶೇಷ ತನಿಖಾ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ರಾಯ್ ಇದ್ದ ಕಚೇರಿ ಶಬ್ಧ ನಿಯಂತ್ರಿತ ಕೊಠಡಿಯಾಗಿದ್ದರಿಂದ ಶೂಟ್ ಮಾಡಿಕೊಂಡ ಶಬ್ಧವೂ ಅಲ್ಲಿನ ಸಿಬ್ಬಂದಿಗಳಿಗೆ ಕೇಳಿಸಿಲ್ಲ. ಅಲ್ಲದೆ, ಐಟಿ ವಿಚಾರಣೆ ಮುಗಿಯುವವರೆಗೂ ಅನುಮತಿ ಇಲ್ಲದೆ ಕೇಂದ್ರ ಸ್ಥಾನದಿಂದ ಹೊರಗೆ ಹೋಗುವಂತ್ತಿಲ್ಲ ಎಂಬ ಸೂಚನೆಯೂ ಇತ್ತು ಎಂದು ಹೇಳಲಾಗಿದೆ.
ಅನಗತ್ಯ ಊಹಾಪೋಹ: ಗೃಹ ಸಚಿವ ಪರಮೇಶ್ವರ್
ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಅನಗತ್ಯ ವದಂತಿ ಹರಡಬಾರದು ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಾಯ್ ಅವರ ನಿಕಟವರ್ತಿಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ಪರಮೇಶ್ವರ್, ಅಂತಹ ಊಹಾಪೋಹಗಳನ್ನು ತಡೆಯಲು ಸರ್ಕಾರ ಎಸ್‌ಐಟಿ ರಚಿಸಿದೆ. ಆತ್ಮಹತ್ಯೆಯಲ್ಲಿ ಯಾರದ್ದಾದರೂ ಪಾತ್ರವಿದ್ದರೆ ಎಸ್‌ಐಟಿ ವರದಿಯಲ್ಲಿ ಬೆಳಕಿಗೆ ಬರಲಿದೆ ಎಂದರು.

