ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಡಾ.ಕೃಷ್ಣಾ ಮನವಲ್ಲಿ ಅವರು ಶಿವಮೊಗ್ಗದ ಅಹಿರ್ನಿಷಿ ಪ್ರಕಾಶನದ ವತಿಯಿಂದ ಪ್ರಕಟಿಸಲಾದ 3 ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಬಿ. ಶ್ರೀಪಾದ ಭಟ್ ಅವರು ರಚಿಸಿರುವ ವಿಮೋಚನೆಯ ಕನಸುಗಳು, ಸಾವಿತ್ರಿಬಾಯಿ ಫುಲೆ ಬದುಕು ಹೋರಾಟ, ರಹಮತ್ ತರೀಕೆರೆ ಅವರ ಕುಲುಮೆ ಹಾಗೂ ಹೆಚ್ ನಾಗವೇಣಿ ಅವರ ಗಾಂಧಿ ಬಂದ ಕೃತಿಗಳು ಬಿಡುಗಡೆಗೊಂಡವು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಆಡಳಿತಾದಿಕಾರಿ ಕೆ ಬಿ ಕಿರಣ್ ಸಿಂಗ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ ಚಂದ್ರಶೇಖರ್ ಹಾಗೂ ಕವಿಯತ್ರಿ ಸುಚಿತ್ರ ಹೆಗಡೆ ಉಪಸ್ಥಿತರಿದ್ದರು.


