Online News in ಕನ್ನಡ

ಮೈಸೂರಿನಲ್ಲಿ ಮತ್ತೆ ಮಾದಕ ವಸ್ತು ಪತ್ತೆ : ಮೂವರ ಬಂಧನ: ಎಂಡಿಎಂಎ ವಶ

ಮೈಸೂರು: ನಗರದ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಲಾಗಿದೆ.
ಉದಯಗಿರಿ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿರುವ ಮೂನ್‌ ಬಕ್ಸ್‌ ಕೆಫೆ ಬಳಿ ಅಮೀರ್‌ ಖಾನ್‌, ಸೈಯದ್‌ ಇಮ್ರಾನ್‌, ಮಹಮ್ಮದ್‌ ನಬೀಲ್‌ ಎಂಬಾತನನ್ನು ಬಂಧಿಸಿ ಸುಮಾರು ೧.೨೦ ಲಕ್ಷ ರೂ. ಮೌಲ್ಯದ ೧೧ ಗ್ರಾಂ ೯೦ ಮಿಲಿಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಮೂರು ಆರೋಪಿಗಳ ಪೈಕಿ ಆರೋಪಿ ಅಮೀರ್ ಖಾನ್ ಈತನ ವಿರುದ್ಧ ಈ ಹಿಂದೆ ಕೂಡ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ. ಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Call Now Button