Online News in ಕನ್ನಡ

ಗೌಡನಕಟ್ಟೆ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ಯಶಸ್ವಿ : ನಾಲ್ಕು ಹುಲಿ ಮರಿಗಳ ರಕ್ಷಣೆ

ನಗೋಡು : ಕಳೆದ ಮೂರು ದಿನಗಳ ಹಿಂದೆ ತಾಯಿ ಹುಲಿಯಿಂದ ಬೇರ್ಪಟ್ಟು ಜೋಳದ ಹೊಲದಲ್ಲಿ‌ ಆಡಗಿಕೊಂಡು ಆತಂತ ಸೃಷ್ಟಿಸಿದ 4 ಹುಲಿ ಮರಿಗಳನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗೌಡನಕಟ್ಟೆ ಗ್ರಾಮದಲ್ಲಿ
ಕಳೆದ ಮೂರು ದಿನಗಳ ಹಿಂದೆ ಗ್ರಾಮದ ಹೊರ ವಲಯದಲ್ಲಿರುವ ಜೋಳದ ಹೊಲದಲ್ಲಿ ತಾಯಿ ಹುಲಿಯು ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಅಂದೇ ತಾಯಿ ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದರು. ತಾಯಿಯಿಂದ ಬೇರ್ಪಟ್ಟು ಕಂಗಾಲಾಗಿದ್ದ 4 ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದರು.
ಶನಿವಾರ ಬೆಳಗ್ಗೆ ಆರಂಭವಾದ ಶೋಧಕಾರ್ಯದಲ್ಲಿ ಅರಣ್ಯ ಇಲಾಖೆ ಟಾಸ್ಕ್‌ಫೋರ್ಸ್ ಸಿಬ್ಬಂದಿ ಮತ್ತು ನಾಲ್ಕು ಸಾಕಾನೆಗಳ ಸಹಾಯದೊಂದಿಗೆ ಗ್ರಾಮ ಹೊರವಲಯದ ಜೋಳದ ಹೊಲದಲ್ಲಿ ಅಡಗಿದ್ದ ನಾಲ್ಕು ಮರಿ ಹುಲಿಗಳನ್ನು ಗ್ರಾಮಸ್ಥರೊಂದಿಗೆ ಸುರಕ್ಷಿತವಾಗಿ ಸೆರೆ ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಲ್ಲಾ ನಾಲ್ಕು ಹುಲಿ ಮರಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಾಂತರಿಸಿದರು.ಗ್ರಾಮದ ಹೊಲಗಳ ಮಧ್ಯದಲ್ಲೇ ಅಡಗಿ ಕುಳಿತಿದ್ದ ಮರಿ ಹುಲಿಗಳನ್ನು ಸೆರೆ ಹಿಡಿಯುವ ವೇಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶಿವಪ್ಪ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ ಹುಲಿ ಸೇರಿ ಒಟ್ಟು ಐದು ಹುಲಿಗಳ ಸೆರೆಗೊಂಡ ಹಿನ್ನೆಲೆಯಲ್ಲಿ ಗೌಡನಕಟ್ಟೆ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

Call Now Button