Online News in ಕನ್ನಡ

ಭಾರತದ ಆರ್ಥಿಕ ಸತ್ತಿದೆ ಎಂದು ಪ್ರಧಾನಿಗೆ ಮಾತ್ರ ಗೊತ್ತಿಲ್ಲ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ಭಾರತವು ‘ಸತ್ತ ಆರ್ಥಿಕತೆ’ ಎಂದು ತಿಳಿದಿದೆ. ಏಕೆಂದರೆ, ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ನಡೆಯುವ ಸಾಧ್ಯತೆಯಿದೆ ಮತ್ತು ಡೊನಾಲ್ಡ್ ಟ್ರಂಪ್ ಅದನ್ನು ರೂಪಿಸುತ್ತಾರೆ. ಆದರೆ, ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿ ಆದೇಶ ಹೊರಡಿಸಿದ್ದು, ‘ಭಾರತ ಮತ್ತು ರಷ್ಯಾ ಈಗಾಗಲೇ ‘ಸತ್ತಿರುವ’ ತಮ್ಮ ಆರ್ಥಿಕತೆಯನ್ನು ಒಟ್ಟಿಗೆ ಇನ್ನಷ್ಟು ನೆಲಕಚ್ಚುವಂತೆ ಮಾಡಿಕೊಳ್ಳುತ್ತವೆ. ಭಾರತದೊಂದಿಗೆ ನಾವು ಅತ್ಯಂತ ಸಣ್ಣ ವ್ಯಾಪಾರವನ್ನು ಮಾಡಿದ್ದೇವೆ. ಅಮೆರಿಕದ ಉತ್ಪನ್ನಗಳಿಗೆ ಇತರ ರಾಷ್ಟ್ರಗಳು ವಿಧಿಸುವ ತೆರಿಗೆಗಿಂತ ಭಾರತದ ಸುಂಕ ಅತಿ ಹೆಚ್ಚು’ ಎಂದು ಕರೆದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಭಾರತದ ಆರ್ಥಿಕತೆಯ ಬಗ್ಗೆ ಟ್ರಂಪ್ ಅವರ ಟೀಕೆಯ ಬಗ್ಗೆ ಕೇಳಿದಾಗ, ‘ಅವರು ಹೇಳಿದ್ದು ಸರಿ, ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ, ಭಾರತದ ಆರ್ಥಿಕತೆಯು ಸತ್ತ ಆರ್ಥಿಕತೆ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದರು.

Call Now Button