Online News in ಕನ್ನಡ

ಒಳ ಮೀಸಲಾತಿ ಮಸೂದೆ ಮಂಡನೆಗೆ ವಿರೋಧ : ಕಾಂಗ್ರೆಸ್‌ ಸರಕಾರಕ್ಕೆ ಎಚ್ಚರಿಕೆ

ಮೈಸೂರು: ಬಹು ಚರ್ಚಿತ  ಮತ್ತು ಗೊಂದಲದ ಗೂಡಾಗಿರುವ ಒಳ ಮೀಸಲಾತಿ ಮಸೂದೆಯನ್ನು  ಈ ಬಾರಿಯ ಅಧಿವೇಶನದಲ್ತಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್‌ ಸರಕಾರದ ಕ್ರಮವನ್ನು ಮೈಸೂರಿನ ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ರಾಜ್ಯಾಧ್ಯಕ್ಷ ಎನ್.‌ ಭಾಸ್ಕರ್‌, ಸರಕಾರ ತರಾತುರಿಯಲ್ಲಿ ಮಸೂದೆ ಮಂಡನೆ ಮಾಡುವ ಸಾಹಸಕ್ಕೆ ಕೈಹಾಕದೆ, ಉಭಯ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದು, ವಿಸ್ತೃತ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿ ಮಸೂದೆ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸಮಗ್ರವಾಗಿ ಚರ್ಚೆಯಾಗದೇ ಈ ಮಸೂದೆ ಮಂಡಿಸುವ ನಿರ್ಧಾರ ಸರಿಯಿಲ್ಲ. ಒಳ ಮೀಸಲಾತಿ ಹಂಚಿಕೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಚ್.ನಾಗಮೋಹನ್ ದಾಸ್ ಏಕ ಸದಸ್ಯ ಸಮಿತಿ ನೇಮಿಸಿ ಸಮಿತಿ ನಿರ್ದೇಶನದ ಮೇರೆಗೆ ಸರ್ಕಾರ ಮೂರು ಗುಂಪುಗಳನ್ನಾಗಿ ವಿಂಗಡಿಸಿ ೬, ೬, ೫ ಅನುಪಾತದಲ್ಲಿ ಮೀಸಲಾತಿಯನ್ನು ಹಂಚಿಕೆ ಮಾಡಿದೆ.

ಒಳ ಮೀಸಲಾತಿ ಮಸೂದೆ ಮಂಡಿಸುವ ಮುನ್ನ ರಾಜ್ಯ ಸರ್ಕಾರ ಸಾಧಕ ಬಾಧಕಗಳನ್ನು ಚರ್ಚೆ ಮಾಡಬೇಕಿತ್ತು. ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮುಖ್ಯಮಂತ್ರಿಗಳು ತಮಗಿಷ್ಟ ಬಂದಂತೆ ನಿರ್ಧಾರ ಕೈಗೊಂಡರೆ ಸಮುದಾಯ ಇದನ್ನು ಒಪ್ಪುವುದಿಲ್ಲ.

– ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗಿ ಪೆದ್ದಿ ಮಠ, ಮೈಸೂರು.

ಒಳ ಮೀಸಲಾತಿಯು ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ಸರ್ಕಾರ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಮುಂಬಡ್ತಿಗೂ ಒಳ ಮೀಸಲಾತಿ ಜಾರಿಗೆ ಮುಂದಾಗಿದೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಲಿದೆ. ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿ ಮದೂದೆ ಮಂಡಿಸಬೇಕು.

– ಡಾ. ಚಂದ್ರಶೇಖರಯ್ಯ, ರಾಜ್ಯಾಧ್ಯಕ್ಷರು, ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಂಘ

ಆಗಿದ್ದೂ ಒಳ ಮೀಸಲಾತಿಯಲ್ಲಿ ನ್ಯೂನತೆಗಳಿವೆ. ಇವುಗಳನ್ನು ಸರಿಪಡಿಸದೇ ಈ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವುದು ಸರಿಯಲ್ಲ. ಸರ್ಕಾರದ ಈ ನಿರ್ಧಾರದಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಲಿದೆ. ರಾಜ್ಯ ಸರ್ಕಾರ ಯಾವ ಸಮಾಜಕ್ಕೆ ಅನ್ಯಾಯ ಮಾಡದಂತೆ ನಿರ್ಣಯ ಕೈಗೊಳ್ಳಬೇಕೆಂದು. ಬಲಗೈ ಸಮುದಾಯದ ಶಾಸಕರು ಮತ್ತು ಸಚಿವರು ಒಗ್ಗಟ್ಟಿನಿಂದ ಒಳ ಮೀಸಲು ಹಂಚಿಕೆಯ ಮಸೂದೆಯನ್ನು ಮಂಡನೆಯನ್ನು ತಡೆದು ಸಮುದಾಯದ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಇಂದಿನ ನಿರ್ಧಾರವೂ ಮುಂಬರುವ ಚುನಾವಣೆಗಳಲ್ಲಿ ಪರಿಣಾಮ ಬೀರುವಂತಾಗಬಾರದು. ಪರಿಶಿಷ್ಟ ಜಾತಿ ಸಮುದಾಯಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಆತುರ ತೋರಬಾರದೆಂದು. ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ನಿರ್ಧಾರ ಕೈಗೊಂಡರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದರು.

 

Call Now Button