Online News in ಕನ್ನಡ

ಕೆಲ್ಲೂರು ಹಾಗೂ ಅರೇನಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ಸಚಿವ ಕೆ. ವೆಂಕಟೇಶ್

ಪಿರಿಯಾಪಟ್ಟಣ : ಕೆಲ್ಲೂರು ಹಾಗೂ ಅರೇನಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಪಿರಿಯಪಟ್ಟಣ ತಾಲೂಕಿನ ಗಡಿಯ ಗ್ರಾಮವಾದ ಕೆಲ್ಲೂರು ಗ್ರಾಮದಲ್ಲಿ ಗೌರಿ ಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಕೆ ಆರ್ ನಗರ ರಾವಂದೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಈ ಗ್ರಾಮದಲ್ಲಿ ಬಹುತೇಕ ಎಲ್ಲಾ ಅಭಿವೃದ್ಧಿ ಕಾರ್ಯಗಳು 90ರಷ್ಟು ಮುಗಿದಿದ್ದು ಇನ್ನು ಉಳಿಕೆ ಕೆಲಸವನ್ನು ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಸಹ ಮಾಡಿಕೊಡಲಾಗುತ್ತದೆ ಹಾಗೂ ಈಗಾಗಲೇ ಕೆಲವರು ರಾಮೇನಹಳ್ಳಿ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಯಾವುದೇ ಜನ ಪ್ರತಿನಿಧಿಗಳಾದರೂ ಜನರ ಆಶೋತ್ತರಗಳನ್ನು ಈಡೇರಿಸುವ ಮನೋಭಾವವನ್ನು ಹೊಂದಿರಬೇಕು ಹಾಗೂ ತಾಲೂಕಿನಲ್ಲಿ ಶಾಶ್ವತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಜನರ-ಮನಸಲ್ಲಿ ಉಳಿಯುವಂತಹ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದವರು ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುತ್ತಿದ್ದಾರೆ.

ಅದಕ್ಕೆ ಕಿವಿಗೊಡಬೇಡಿ ಏಕೆಂದರೆ ಈಗ ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳು ಬಿಜೆಪಿಯವರ ಟೀಕೆಗೆ ತಕ್ಕ ಉತ್ತರವಾಗಿದೆ

  • ಕೆ. ವೆಂಕಟೇಶ್, ಸಚಿವ

ಕೆಲ್ಲೂರು ಗ್ರಾಮಸ್ಥರ ಹಲವಾರು ವರ್ಷದ ಬೇಡಿಕೆಯಾದ ಕೆ ಆರ್ ನಗರ ರಾವಂದೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಜನರ ಬೇಡಿಕೆಗಳನ್ನು ಈಡೇರಿಸಿದಂತಾಗುತ್ತದೆ ಎಂದು ತಿಳಿಸಿದರು. ‌ ಶಾಲೆಗೆ ಭೇಟಿ: ಸಚಿವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಹಾಗೂ ಮಕ್ಕಳು ಊಟ ಮಾಡಲು ಊಟದ ಮನೆಯನ್ನು ಅತಿ ಶೀಘ್ರದಲ್ಲೇ ಮಂಜೂರಾತಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುಟಾಣಿ ಮಕ್ಕಳು ಸಚಿವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ ಟಿ ಸ್ವಾಮಿ, ರಾಮತ್ ಜಾನ್ ಬಾಬು, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಕೆಲ್ಲೂರು ನಾಗರಾಜ್, ಡಿಎಸ್ ನಂದೀಶ್ ,ವಿ ಜಿ ಕೊಪ್ಪಲು ಲೋಕೇಶ್, ಇ ಒ ಸುನಿಲ್, ಎ ಡಬಲ್ ಇ ವೆಂಕಟೇಶ್, ರವಿ ಪ್ರಸನ್ನ ಸೋಮಯ್ಯ, ಸಣ್ಣ ಸ್ವಾಮಿ ಕೀರ್ತಿ ಸೇರಿದಂತೆ ಗ್ರಾಮದ ಯಜಮಾನರು ಮುಖಂಡರು ತಾಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು.

Call Now Button