ಮೈಸೂರು : ಪ್ರತ್ಯೇಕ ಪ್ರಕರಣದಲ್ಲಿ ಕೇರಳಾ ರಾಜ್ಯದ ಲಾಟರಿ ಟಿಕೆಟ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 65 ಸಾವಿರ ರೂ. ಮೌಲ್ಯದ ಲಾಟರಿ ಮತ್ತು ನಗದನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲೆ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಬಂಧಿತರು ಪಿರಿಯಾಪಟ್ಟಣದ ನಿವಾಸಿಗಳಾದ ಅರುಣ್ ಕುಮಾರ್ ಅಲಿಯಾಸ್ ಅರುಣ್ ಹಾಗೂ ಸ್ವಾಮಿ ಎಂದು ಗುರುತಿಸಲಾಗಿದೆ.
ಮೊದಲ ಪ್ರಕರಣದಲ್ಲಿ ಪಿರಿಯಾಪಟ್ಟಣದ ಶ್ರೀ ವೆಂಕಟೇಶ್ವರ ವೇ ಬ್ರಿಡ್ಜ್ ಬಳಿ ಲಾಟರಿ ಮಾರುತ್ತಿದ್ದ ಅರುಣ್ ಬಂಧಿಸಿ, ಈತನಿಂದ 55,200 ರೂ.ನಗದು ಹಾಗೂ 22930 ರೂ.ನಗದು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ. ಸಿಂಚನ ಹೋಟೆಲ್ ನಲ್ಲಿ ಲಾಟರಿ ಮಾಡುತ್ತಿದ್ದ ಸ್ವಾಮಿ ಬಂಧಿಸಿ ಈತನಿಂದ
33 ಸಾವಿರ ರೂ. ಮೌಲ್ಯದ ಲಾಟರಿ ಮತ್ತು , 2930 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಇನ್ಸ್ಪೆಕ್ಟರ್ ಗೋವಿಂದರಾಜು, ಪಿಎಸ್ಸೈ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿ ಮುಂದಿನ ಕ್ರಮಕೈಗೊಂಡಿದ್ದಾರೆ.

