Online News in ಕನ್ನಡ

ಮಹಿಳಾ ರಕ್ಷಣಾ ಪಡೆ ಸೇವಾ ಸಂಸ್ಥೆಯಿಂದ ಕನ್ನಡ ಕಣ್ಮಣಿ ಪ್ರಶಸ್ತಿ ಕಾರ್ಯಕ್ರಮ

ಮೈಸೂರು : ಮಹಿಳಾ ರಕ್ಷಣಾ ಪಡೆ ಸೇವಾ ಸಂಸ್ಥೆಯಿಂದ ಕನ್ನಡ ಕಣ್ಮಣಿ ಪ್ರಶಸ್ತಿ ಕಾರ್ಯಕ್ರಮ ಕಳೆದ ಐದು ವರ್ಷಗಳಿಂದ ಮಹಿಳಾ ರಕ್ಷಣಾ ಪಡೆಯು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಲೇ ಬಂದಿದೆ. ಅದೇ ರೀತಿ ಈ ಬಾರಿ ವಿಶೇಷವಾಗಿ ಮಹಿಳಾ ಸಾಧಕಿಯರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮಾವನ್ನು ಹಮ್ಮಿಕೊಂಡಿದ್ದೇವೆ ಎಂದು ಮಹಿಳಾ ರಕ್ಷಣಾ ಪಡೆ ರಾಜ್ಯಾಧ್ಯಕ್ಷೆ ಮೇಘನಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಲತಾಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೫ನೇ ತಾರೀಕಿನಂದು ನಗರದ ಇನ್ಸ್ಟೂಟ್ ಆಫ್ ಇಂಜಿನಿಯರಿಂಗ್ ಹಾಲ್ ನಲ್ಲಿ ನಡೆಯುತ್ತಿದ್ದು, ವಿಶೇಷ ಅಥಿತಿಗಳಾಗಿ ಚಾಮರಾಜ ಕ್ಷೇದ ಶಾಸಕ ಹರೀಶ್ ಗೌಡ , ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು , ಮಾಜಿ ಮಹಾನಗರಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್ ಸೇರಿದಂತೆ ಇನ್ನು ಅನೇಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸಾಧಕಿಯರಿಗೆ ಪ್ರಶಸ್ತಿ ನೀಡುತ್ತಿರುವ ಮುಖ್ಯ ಉದ್ದೇಶ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಗುರ್ತಿಸಿಕೊಂಡಿದ್ದು ಪಟ್ರೋಲ್ ಬಂಕ್ , ಆಟೋ ಚಾಲಾಕಿ , ಬಸ್ ಕಂಡಕ್ಟರ್ , ಪೌರಕಾರ್ಮಿಕಳಾಗಿ ಜೊತೆಗೆ ಹೋಟೆಲ್ ಹಾಗೂ ರೆಸ್ಟೋರೆಂಟ್’ಗಳ ಮ್ಯಾನೇಜರ್’ಆಗಿಯು ಸೇವೆ ಸಲ್ಲಿಸುತ್ತಿದ್ದು ಅಂತಹ ಮಹಿಳೆಯರನ್ನ ಗುರುತಿಸಿ ಪ್ರಶಸ್ತಿ ನೀಡಿ ಗೌರವ ಸಲ್ಲಿಸುವುದೇ ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಮಾತು ಮುಂದುವರೆಸಿದ ಲತಾಗೌಡ ಕೇವಲ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡುವುದು ಮಾತ್ರವಲ್ಲದೇ ಶಾಲಾ ಕಾಲೇಜಿನ ಬಡ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಶಾಲಾ ಬ್ಯಾಗ್ ಗಳನ್ನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲತಾಗೌಡ ಜೊತೆ ಕಮಲಾ ನಟರಾಜ್, ಮೇಘನಾ ಗೌಡ, ಅಶ್ವಿನಿ ಗೌಡ ಮತ್ತು ಸೌಮ್ಯ ಭಾಗಿಯಾಗಿದ್ದರು.

Call Now Button