Online News in ಕನ್ನಡ

ಸುತ್ತೂರು ಜಾತ್ರೆಯ ಕಟೌಟ್‌ ತೆರವು ವೇಳೆ ಆಯಾತಪ್ಪಿ ಬಿದ್ದು ವ್ಯಕ್ತಿ ಸಾವು

ಮೈಸೂರು: ಇತ್ತೀಚೆಗಷ್ಟೇ ಅಂತ್ಯಗೊಂಡ ಸುತ್ತೂರು ಜಾತ್ರೆಯಲ್ಲಿ ಅಳವಡಿಸಿದ್ದ ಕಟೌಟ್‌ಗಳನ್ನು ತೆರವುಗೊಳಿಸುವಾದ ಆಯಾತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಮೃತರನ್ನು ನಗರದ ಕ್ಯಾತಮಾರನಹಳ್ಳಿ ನಿವಾಸಿ ರವಿಕುಮಾರ್‌ (37) ಎಂದು ಗುರುತಿಸಲಾಗಿದೆ.
ಜನವರಿ 21ರಂದು ಸುತ್ತೂರು ಜಾತ್ರೆ ಮುಗಿದ ಬಳಿಕ ಅಳವಡಿಸಲಾಗಿದ್ದ ಎತ್ತರದ ಕಟೌಟ್‌ಗಳನ್ನು ತೆರವುಗೊಳಿಸುವ ವೇಳೆ ಮೇಲಿನಿಂದ ಬಿದ್ದು ರವಿಕುಮಾರ್‌ ಗಾಯಗೊಂಡಿದ್ದರು. ಇವರನ್ನು ಬಿ.ಜಿ.ಎಸ್.‌ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಸಂಜೆ ಮೃತಪಟ್ಟಿದ್ದಾರೆ.
ಹೋಲ್ಡಿಂಗ್ಸ್‌ ಮತ್ತು ಕಟೌಟ್‌ಗಳ ಅವಳಡಿಕೆಗೆ ಟೆಂಡರ್‌ ಪಡೆದಿದ್ದ ವ್ಯಕ್ತಿ ಈ ಘಟನೆ ನಡೆದ ದಿನದಿಂದ ನಾಪತ್ತೆಯಾಗಿದ್ದರಿಂದ ಗಾಯಗೊಂಡ ರವಿಕುಮಾರ್‌ಗೆ ಸೂಕ್ತ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ. ರಾತ್ರಿ ವೇಳೆ ಕಟೌಟ್‌ಗಳನ್ನು ತೆರವುಗೊಳಿಸಲು ಕೂಲಿಗೆಂದು ಕರೆದುಕೊಂಡು ಹೋಗಿದ್ದರು. ಬಿದ್ದು ಗಾಯಗೊಂಡ ಮೇಲೆ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಕುಟುಂಬಸ್ಥರು ಗೋಳಾಡಿದ್ದಾರೆ.
ಮೃತ ರವಿಕುಮಾರ್‌ ಪತ್ನಿ, ಎರಡು ವರ್ಷದ ಮಗು ಇದ್ದಾರೆ.

Call Now Button