ಮೈಸೂರು: ʻನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ, ಮುಂದಿನ ಚುನಾವಣೆಯನ್ನು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುತ್ತೇನೆʼ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಆದರೆ, ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರುವ ಜೆಡಿಎಸ್ ಪಕ್ಷದ ಜಿಲ್ಲಾ ನಾಯಕ ಹಾಗೂ ಮಾಜಿ ಶಾಸಕಕ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡರು ನಮ್ಮ ಪಕ್ಷದಲ್ಲಿ ಇಲ್ಲ. ಇದನ್ನು ಈಗಾಗಲೇ ನಮ್ಮ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ. ಆಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ.
ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ:
ನಾನು ಈಗಲೂ ಜೆಡಿಎಸ್ ಪಕ್ಷದಲ್ಲಿ ಇದ್ದೀನಿ. ಮುಂದೆಯೂ ಇರುತ್ತೇನೆ. ಆ ಪಕ್ಷವನ್ನು ಬಿಡುವುದಿಲ್ಲ . ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಎಲ್ಲ ನಿರ್ಧಾರವನ್ನು ಕ್ಷೇತ್ರದ ಜನತೆಗೆ ಬಿಡತ್ತೇನೆ ಜಿಟಿಡಿ ಹೇಳಿದರು. ನಾನು ಬೆಳೆಸಿದವರು, ನನ್ನಿಂದ ದುಡ್ಡು ಮಾಡಿಕೊಂಡವರು ನನ್ನ ವಿರುದ್ಧ ನಿಂತಿದ್ದಾರೆ. ಇದು ಇಂದಿನದಲ್ಲ, ಹಿಂದೆಯಿಂದಲೂ ನಡೆದುಕೊಂಡು ಬಂದಿದೆ. ಕ್ಷೇತ್ರದ ಜನರ ಆಶಿರ್ವಾದ ಇರುವರೆಗೂ ರಾಜಕೀಯದಲ್ಲಿ ಇರುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.
ಕಷ್ಟ-ಸುಖಕ್ಕೆ ಇರುವವರಿಗೆ ಟಿಕೆಟ್:
ಜಿಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ, ಜೆಡಿಎಸ್ ಮುಖಂಡ ಸಾರಾ ಮಹೇಶ್, ಜಿಟಿಡಿ ನಮ್ಮ ಪಕ್ಷದಲ್ಲಿ ಇಲ್ಲ. ಇದನ್ನು ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಹೇಳಿದ ಮೇಲೆ ಮುಗಿಯಿತು. ಅದೇ ಅಂತಿಮ ನಿರ್ಧಾರ. ಒಂದು ವೇಳೆ ಪಕ್ಷ ನಿರ್ಧಾರ ಬದಲಿಸಿ ಅವರಿಗೇ ಟಿಕೆಟ್ ನೀಡಿದರೆ ಅದಕ್ಕೂ ನಾವು ಬದ್ಧರಿದ್ದೇವೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಷ್ಟ ಸುಖಕ್ಕೆ ಯಾರು ಆಗಿದ್ದಾರೆ ಅವರನ್ನು ಗುರುತಿಸುತಿದ್ದೇವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕೆ.ಆರ್.ನಗರಕ್ಕೆ ಬಂದು ಜಿ.ಟಿ.ದೇವೇಗೌಡರು ಏನು ಮಾಡಿದ್ರು, ಸಹಕಾರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಸಹಾಯ ಮಾಡಿದ್ರು ಎಲ್ಲ ಗೊತ್ತಿದೆ. ನಾನು ಹಿಂದೆ ಬಿಜೆಪಿಯಲ್ಲಿದ್ದೆ. ಈಗ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ. ನಾವು ಯಾವ ಪಕ್ಷದಲ್ಲಿ ಇರುತ್ತೇವೆ ಅದನ್ನೇ ನಮ್ಮ ತಾಯಿ ಎಂದು ಭಾವಿಸಿದ್ದೇವೆ ಎಂದು ತಿರುಗೇಟು ನೀಡಿದರು.
ಒಟ್ಟಾರೆ, ಮೈಸೂರು ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಹೊಂದಿರುವ ಜಾತ್ಯಾತಿತ ಜನತಾದಳ ಇದೀಗ ಒಡೆದ ಮನೆಯಾಗಿದ್ದು, ಮುಂದಿನ ಚುನಾವಣೆ ವೇಳೆಗೆ ಎಲ್ಲವೂ ಸ್ಪಷ್ಟವಾಗಲಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,


