Online News in ಕನ್ನಡ

ʻಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ವರುಣಾ ಜನತೆಯ ಋಣ ತೀರಿಸಲಾಗದುʼ

ತಾಂಡವಪುರ : ನಾವು ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ವರುಣ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ ಆದರೂ ವರುಣ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜನತೆಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಿ ತಮ್ಮ ಋಣ ಕಡಿಮೆ ಮಾಡಿಕೊಳ್ಳಲು ಶ್ರಮಿಸುತ್ತೇನೆ ಎಂದು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ರಾಮಯ್ಯ ತಿಳಿಸಿದರು.
ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ೩ ಕೋಟಿ ರೂ.ಗೂ ಹೆಚ್ಚು ಅನುದಾನದಲ 10 ಗ್ರಾಮಗಳ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಸಿಎಸ್ಆರ್ ನಿಧಿ ಮತ್ತು ಸರ್ಕಾರದ ಅನುದಾನದಲ್ಲಿ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲುಪುರ ಶಾಲೆ, ಬಿದರಗೂಡು ಶಾಲೆ, ಮರಳೂರು ಶಾಲೆ ನಗರಲ್ಲೇ ಶಾಲೆ ಸುತ್ತೂರು ಶಾಲೆ ಆರೋಪುರ ಶಾಲೆ ಸೇರದಂತೆ ಸುಮಾರು 10 ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಕ್ರಮಕೈಗೊಂಡು ಈಗ ತಾಂಡವಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವನದಲ್ಲಿ ಒಂದೇ ಸ್ಥಳದಲ್ಲಿ ಭೂಮಿ ಪೂಜೆ ನೇರಸಲಾಗಿದ್ದು ನಮ್ಮ ತಂದೆ ವಿರೋಧ ಪಕ್ಷ ನಾಯಕರಾಗಿದ್ದಾಗ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಂದಿರಲಿಲ್ಲ ಆದರೂ ಸ್ವಲ್ಪಮಟ್ಟಿಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಲಾಗಿತ್ತು ಈಗ ನಮ್ಮದೇ ಸರ್ಕಾರ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದು ಕ್ಷೇತ್ರದ ಶಿಕ್ಷಣಕ್ಕೆ ಮೂಲಭೂತ ಸೌಲಭ್ಯಗಳಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ವರುಣ ಕ್ಷೇತ್ರದ ಜನತೆ ನಮ್ಮ ತಂದೆ ಸಿದ್ದರಾಮಯ್ಯನವರನ್ನು ಎರಡು ಬಾರಿ ಮುಖ್ಯಮಂತ್ರಿ ಆಗಿ ಮಾಡಿದ್ದೀರಿ ಒಂದು ಬಾರಿ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೀರಿ ನನ್ನನ್ನು ಸಹ ಒಂದು ಬಾರಿ ಶಾಸಕರಾಗಿ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ ಇದೇ ರೀತಿ ನಿಮ್ಮ ಪ್ರೀತಿ ವಿಶ್ವಾಸ ಇಲ್ಲಿ ಮುಂದೆಯೂ ಸಹ ಹೀಗೆ ಇರಲಿ ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮರವರು ವರ್ಣ ವಿಧಾನಸಭಾ ಕ್ಷೇತ್ರದಲ್ಲಿ ಅದರಲ್ಲೂ ತಾಂಡವಪುರ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೈಗಾರಿಕೆಗಳಾಗಿದ್ದು ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಮತ್ತು ಕೆಲಸವನ್ನು ದೊರಕಿಸಿಕೊಡಬೇಕು ಆ ನಿಟ್ಟಿನಲ್ಲಿ ತಾವು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರಲ್ಲಿ ಮನವಿ ಮಾಡಿದರು
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ ಬಸವರಾಜ ಮಾತನಾಡಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು ಅದರಲ್ಲೂ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಡಾಕ್ಟರ್ ಯತಿಂದ್ರ ಸಿದ್ರಾಮಯ್ಯನವರು ಹೆಚ್ಚು ಶ್ರಮ ವಹಿಸುತ್ತಿದ್ದು ಜೊತೆಗೆ ವರುಣ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಮಾಡಲು ಎಲ್ಲಾ ರೀತಿಯ ಅಭಿವೃದ್ಧಿ ಕೆಸಗಳಾದ ರಸ್ತೆ ಚರಂಡಿ ಶಾಲಾ ಕೊಡಲಿ ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಒತ್ತುಕೊಟ್ಟು ವರುಣ ವಿಧಾನಸಭಾ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಮಾಡಲು ಹೆಚ್ಚು ಶ್ರಮ ವಹಿಸುತ್ತಿದ್ದಾರೆ ಎಂದು ಬಸವರಾಜ್ ರವರು ಮೆಚ್ಚಿಗೆ ವ್ಯಕ್ತಪಡಿಸಿದರು
ಸಮಾರಂಭದಲ್ಲಿ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಸ್ ಸಿ ಬಸವರಾಜು ಬಿ ಎಂ ರಾಮು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ರೇವಮ್ಮ ಮಾಲೆಗೌಡ ದಯಾನಂದಮೂರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮ ಶ್ರೀಧರ್ ಬಗರ್ ಹುಕುಂ ಸಮಿತಿಯ ಸದಸ್ಯರಾಜು ಉಪಾಧ್ಯಕ್ಷರಾದ ಬಿ ಶಿವಣ್ಣ ಮಹದೇವಮ್ಮ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಹುಳಿಮಾವು ನಟರಾಜು ವಿಶ್ವಕರ್ಮ ಅಭಿನಯದ ಮಾಜಿ ಅಧ್ಯಕ್ಷ ನಂದ ಕುಮಾರ ವೀರಶೈವ ಮುಖಂಡ ಪರಶಿವಮೂರ್ತಿತಾಂಡವಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ ಕೆ ನಾಗೇಶ ಗ್ರಾಮ ಪಂಚಾಯತ್ ಸದಸ್ಯರಾದ ಮಧುರ ಆನಂದ್ ರೇವಮ್ಮ ಎನ್ ಚಂದ್ರುಶ್ರೀಕಂ ಸ್ವಾಮಿ ಪ್ರಭುಸ್ವಾಮಿ ನಟರಾಜು ಸಿದ್ದಮ್ಮಮಧುಎಂ ದಕ್ಷಿಣ ಮೂರ್ತಿಕಲ್ಮಲ್ಲಿ ಸುರೇಶ್ ಬಾಬು ಪ್ರಜ್ವಲ್ ಮರಳೂರು ಕೃಷ್ಣ ಮಾಲೆಗೌಡ ಬಿ ಪುಟ್ಟಸ್ವಾಮಿ ರಾಜಶೇಖರ್ ಸಿದ್ದರಾಮಯ್ಯನ ಹುಂಡಿ ಡೈರಿ ಅಧ್ಯಕ್ಷ ಸಿದ್ದ ರಾಮುಗೋನಳ್ಳಿ ಕುಮಾರಟಿಎಸ್ ರವಿ, ಬಿದರಗೂಡು ಮಾದೇವಸ್ವಾಮಿ ಆರೋಪುರ ಶಿವಣ್ಣ ಸಿದ್ದಪ್ಪ ಟಿ ಜೆಮಹದೇವ ಅರ್ಕೇಶ್ ಶಿವರಾಜುಅಣ್ಣಯ್ಯ ಕೆ ಎಸ್ ಹುಂಡಿ ರವಿ ಸಿದ್ದರಾಜು ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯ ರವಿಕಿಟ್ಟಿಯಶವಂತ ಮೋಹನ್ ಕುಮಾರ್ ಬಿಳಿಗೆರೆ ರವಿ ಜಯಶೀಲತಾಲೂಕು ದಂಡದಿಕರಾದ ಶಿವಕುಮಾರ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಧಿಕಾರಿ ರಾಜೇಶ್ ಶಿಕ್ಷಣಾಧಿಕಾರಿ ಮಹೇಶ್ ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ಮಂಜುನಾಥ್ ಸಿದ್ದರಾಜು ತಾಂಡವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಲೆಕ್ಕ ಸಹಾಯಕ ಪುಟ್ಟರಾಜು ಕಾರ್ಯದರ್ಶಿ ಕೆಕೆ ಮರೆಯ ಸೇರಿದಂತೆ 10 ಗ್ರಾಮಗಳ ಶಾಲೆಯ ಶಿಕ್ಷಕರು ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರುಗಳುಮುಖಂಡರು ಗ್ರಾಮಸ್ಥರು ಹಾಜರಿದ್ದರು

Call Now Button