ಮೈಸೂರು: ಕುಂಬಾರಕೊಪ್ಪಲಿನ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ, ಈಜುಕೊಳ ನಿರ್ಮಾಣ, ಟೌನ್‌ಹಾಲ್ ಅಭಿವೃದ್ಧಿ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಲು ಪರೀಕ್ಷಾ ಉಪ ವಿಭಾಗ ಮತ್ತು ಪ್ರಯೋಗಾಲುಯವನ್ನು ಸ್ಥಾಪಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಒಳಗೊಂಡ ಮೈಸೂರು ನಗರಪಾಲಿಕೆಯ 2026-27ನೇ ಸಾಲಿನ ಬಜೆಟನ್ನು ಮಂಡಿಸಲಾಯಿತು.
ನಗರಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ನಗರಪಾಲಿಕೆಯ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಅವರು, ನಗರಪಾಲಿಕೆಯು ನಿರ್ವಹಣಾ ಸಂಸ್ಥೆಯಾಗಿದ್ದು, ನಾಗರೀಕರುಗಳಿಗೆ ಮೂಲಭೂತ ಸೌಕರ್ಯಗಳನ್ನು ವುಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಒದಗಿಸಲು ಹಣಕಾಸಿನ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
ಮೈಸೂರು ನಗರಪಾಲಿಕೆ ಮುಖ್ಯಾಂಶಗಳು:
- ಕುಂಬಾರಕೊಪ್ಪಲಿನ ಕ್ರೀಡಾಂಗಣ ಸಮಗ್ರ – 5 ಕೋಟಿ ರೂ.
- ಪುರಭವನ ಅಭಿವೃದ್ಧಿ- 3 ಕೋಟಿ ರೂ.
- ಮೂರು ಕ್ಷೇತ್ರಗಳಲ್ಲಿ ಈಜುಕೊಳ ನಿರ್ಮಾಣ-
- ಪರೀಕ್ಷಾ-ಪ್ರಯೋಗಾಲಯ ಕೇಂದ್ರ ಸ್ಥಾಪನೆ- 1 ಕೋಟಿ ರೂ.
- ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿ – 10 ಕೋಟಿ ರೂ.
- ಪುಟ್ಟರಾಜು ಗವಾಯಿ ಕ್ರೀಡಾಂಗಣ ಅಭಿವೃದ್ಧಿ- 1.10 ಕೋಟಿ ರೂ.
- ವೃತ್ತಗಳ ಅಭಿವೃದ್ಧಿ – 5 ಕೋಟಿ ರೂ.
- ರಸ್ತೆ, ಚರಂಡಿಗಳ ಅಭಿವೃದ್ಧಿ- 30 ಕೋಟಿ ರೂ.
- ನೀರು, ಒಳಚರಂಡಿ ಮಾರ್ಗ ಅಭಿವೃದ್ಧಿ- 30 ಕೋಟಿ ರೂ.
- ಎರಡು ಪಾರಂಪರಿಕ ಶೌಚಾಲಯ ನಿರ್ಮಾಣ
- ಮೂರು ಕ್ಷೇತ್ರಗಳಲ್ಲಿ ಮಾರುಕಟ್ಟೆಗಳ ನಿರ್ಮಾಣ
- ಇ-ಆಫೀಸ್ 1-9 ಕಚೇರಿಗಲ್ಲಿ ಏಪ್ರಿಲ್ 1ರಿಂದ ಜಾರಿ
- ಅಭಿಲೇಖಾಲಯದ ಎಬಿಸಿ ಕಡತಗಳ ಗಣಕೀಕರಣ
- ಮಿಯಾವಾಕಿ ಮಾರದಿ ಕಿರು ಅರಣ್ಯ ಅಭಿವೃದ್ಧಿ.
- ಉದ್ಯಾನವನಗಳಲ್ಲಿ ಮಾಹಿತಿ ಫಲಕ ಅಳವಡಿಕೆ
- ಉದ್ಯಾನವನಗಳಲ್ಲಿ ಹೊರಾಂಗಣ ಸಂಗೀತ ವಾದ್ಯ
- ಸಾಲು ಮರಗಳ ಸಮೀಕ್ಷೆ
- 13 ಸಾವಿರ ಗಿಡ ನೆಡಲು ನಗರಪಾಲಿಕೆ ಸಂಕಲ್ಪ
- ಪಾರ್ಕ್‌ಗಳಲ್ಲಿ ವ್ಯಾಯಾಮ ಸಲಕರಣೆಗಳ ನಿರ್ವಹಣೆ
- ಗ್ರೀನ್ ಪ್ರಾಪರ್ಟಿ ಟ್ಯಾಗ್ ಯೋಜನೆ ಜಾರಿ
- ವೇಸ್ಟ್ ಟು ವಂಡರ್ ಪಾರ್ಕ್ ಅಭಿವೃದ್ಧಿ
- ವಸತಿ ರಹಿತರ ಆಶ್ರಯ ಕೇಂದ್ರದ ನಿರ್ವಾಹಣೆ
ಕುಂಬಾರಕೊಪ್ಪಲಿನ ಕ್ರೀಡಾಂಗಣ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂ. ಟೌನ್ ಹಾಲ್ ಅಭಿವೃದ್ಧಿಗೆ 3 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ನಗರದ ವ್ಯಾಪ್ತಿಗೆ ಬರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಪಿಪಿಪಿ ಮಾದರಿಯಲ್ಲಿ ಈಜು ಕೊಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಿರ್ಮಾಣದ ಹಂತದಲ್ಲಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ 1 ಕೋಟಿ ರೂ. ವೆಚ್ಚದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗುವುದು.
ಜನಸ್ನೇಹಿ ಪಾದಚಾರಿಗಳ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ. ಪುಟ್ಟರಾಜ ಗವಾಯಿ ಕ್ರೀಡಾಂಗಣ ಅಭಿವೃದ್ಧಿಗೆ 1.10 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಪ್ರಮುಖ ವೃತ್ತಗಳ ಅಭಿವೃದ್ಧಿಗೆ 5 ಕೋಟಿ ರೂ.ಗಳು, ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗೆ 30 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ನೀರು ಸರಬರಾಜು ಮತ್ತು ಒಳಚರಂಡಿಗಳ ಕೋಳವೆ ಮಾರ್ಗಗಳ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಮೈಸೂರು ನಗರದ ಪ್ರವಾಸಿಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪಾರಂಪರಿಕ ಶೈಲಿಯಲ್ಲಿ 2 ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಬಜೆಟ್ ವಿಶೇಷ ಸಭೆಯಲ್ಲಿ ನಗರಪಾಲಿಕೆ ಆಯುಕ್ತ ಶೈಖ್ ತನ್ವೀರ್ ಆಸೀಫ್ ಮತ್ತು ವಿವಿಧ ವಿಭಾಗಗಳ ಅಧಿಕಾರಿಗಳು ಹಾಜರಿದ್ದರು.


