ಮೈಸೂರು: ಮೈಸೂರು ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ನೂತನ ವರ್ಷದ ಬಹುವರ್ಣದ ಕ್ಯಾಲೆಂಡರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಬಿಡುಗಡೆಗೊಳಿಸಿದರು.
ಮೈಸೂರು ಪರಂಪರೆ ಬಿಂಬಿಸುವ ಚಿತ್ರಗಳು, ಪ್ರವಾಸಿ ತಾಣಗಳು, ಜ್ಞಾನಪೀಠ ಪುರಸ್ಕøತರು, ಮೈಸೂರಿನ ಅರಸರು, ಇತ್ತೀಚೆಗೆ ನಿಧನರಾದ ಸಾಲು ಮರದ ತಿಮ್ಮಕ್ಕ, ದೇಶದ ಪ್ರಮುಖ ಪ್ರವಾಸಿ ತಾಣಗಳು, ಮುದ್ರಣಾ ತಂತ್ರಜ್ಞಾನದ ಮಾದರಿಗಳು ಮತ್ತು ಸಂಘದ ಚಟುವಟಿಕೆಗಳ ಚಿತ್ರಗಳು ಒಳಗೊಂಡಂತೆ ಕ್ಯಾಲಂಡರ್ ಮುದ್ರಿಸಲಾಗಿದೆ.

ನಂತರ ಮಾತನಾಡಿದ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್, ಕ್ಯಾಲೆಂಡರ್ಗಳು ಕೇವಲ ದಿನಾಂಕ, ವಾರಗಳನ್ನು ಸೂಚಿಸುವ ಮಾದರಿಯಲ್ಲ. ಬದಲಿಗೆ ನಮ್ಮ ಬದುಕಿನ ಮಾರ್ಗದರ್ಶಿಗಳು. ಏಕೆಂದರೆ, ನಮ್ಮ ಯೋಜನೆ ಮತ್ತು ಯೋಚನೆಗಳು ಆ ದಿನದ ಮಹತ್ವದ ಮೇಲೆ ನಿಂತಿರುತ್ತದೆ. ಇಂದು ಪ್ರತಿಯೊಂದು ಸಂಘ ಸಂಸ್ಥೆಗಳೂ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿವೆ. ಪತ್ರಕರ್ತರಾಗಿ ನಾವೂ ಸಹ ದಿನಾಂಕದೊಂದಿಗೆ ನಮ್ಮ ಸುದ್ದಿಯನ್ನು ಆರಂಭಿಸುತ್ತೇವೆ. ಆದ್ದರಿಂದ ದಿನಾಂಕಕ್ಕೆ ದೊಡ್ಡ ಮಹತ್ವವಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಮೈಸೂರಿನ ಡಿಸೈನರ್ಸ್ ಅಂಡ್ ಪ್ರಿಂಟರ್ಸ್ ಅಸೋಷಿಯೇಷನ್ ಅಸ್ಥಿತ್ವಕ್ಕೆ ಬಂದು ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನ ವಿನ್ಯಾಸಗಾರರು ಮತ್ತು ಮುದ್ರಕರ ಸಹಕಾರದಿಂದ ಬಹುವರ್ಣದ ಕ್ಯಾಲೆಂಡರ್ ಹೊರ ತರಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಸ್.ರಾಮಚಂದ್ರ, ಕಾರ್ಯದರ್ಶಿ ಹರ್ಷ, ಸಹ ಕಾರ್ಯದರ್ಶಿ ಎಂ.ಆರ್. ಮಂಜುನಾಥ್ ಗುಪ್ತ, ಖಜಾಂಚಿ ಎಂ.ಎಸ್.ರುದ್ರಸ್ವಾಮಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.


