ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2025ನೇ ಸಾಲಿನ ವರ್ಷದ ಹಿರಿಯ ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ಅತ್ಯುತ್ತಮ ವರದಿ, ಉತ್ತಮ ಛಾಯಾಚಿತ್ರ, ಉತ್ತಮ ವಿದ್ಯುನ್ಮಾನ ಮಾಧ್ಯಮ ವರದಿಗಳಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಈ ಸಾಲಿನಲ್ಲಿ ವರ್ಷದ ಹಿರಿಯ ಪತ್ರಕರ್ತರಾಗಿ ವಿ. ಮಹೇಶ್ ಕುಮಾರ್ (ಪ್ರಧಾನ ಸಂಪಾದಕರು, ಜಸ್ಟ್ ಕನ್ನಡ, ಮೈಸೂರು), ವರ್ಷದ ಹಿರಿಯ ಪತ್ರಕರ್ತರಾಗಿ (ಗ್ರಾಮಾಂತರ) ಸಾದಿಕ್ ಪಾಷ ಟಿ.ಎ (ಆಂದೋಲನ, ತಲಕಾಡು) ಹಿರಿಯ ಉಪ ಸಂಪಾದಕರಾಗಿ ಕೆ.ಎಸ್.ಮಂಜುನಾಥ್ ಸ್ವಾಮಿ (ವಿಜಯ ಕರ್ನಾಟಕ), ವರ್ಷದ ಹಿರಿಯ ಛಾಯಾಗ್ರಾಹಕರಾಗಿ ಎಸ್. ಉದಯಶಂಕರ್ (ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ) ದೃಶ್ಯ ಮಾಧ್ಯಮ ವಿಭಾಗದಲ್ಲಿ ಸಿ.ಎಂ.ಮಧುಸೂದನ್ (ಹಿರಿಯ ವರದಿಗಾರರು, ಸುವರ್ಣ ನ್ಯೂಸ್ 24 x 7), ಪ್ರಮೋದ ಪ್ರಭು (ಹಿರಿಯ ಛಾಯಾಗ್ರಾಹಕರು, ಟಿವಿ 9) ಅವರನ್ನು ಆಯ್ಕೆ ಮಾಡಲಾಗಿದೆ.

ಅಲ್ಲದೆ, ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಅತ್ಯುತ್ತಮ ಕನ್ನಡ ವರದಿ ಪ್ರಶಸ್ತಿಗೆ ಆಂದೋಲನ ದಿನ ಪತ್ರಿಕೆಯ ದಾ.ರಾ. ಮಹೇಶ್, ವರ್ಷದ ಇಂಗ್ಲಿಷ್ ವರದಿ ಪ್ರಶಸ್ತಿಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆಯ ಎ. ಗಣೇಶ್, ವರ್ಷದ ಫೋಟೋಗ್ರಫಿ ಪ್ರಶಸ್ತಿಗೆ ಎಸ್. ಆರ್. ಮಧುಸೂದನ್ (ಟೈಮ್ಸ್ ಆಫ್ ಇಂಡಿಯಾ ), ದೃಶ್ಯ ಮಾಧ್ಯಮದ ಅತ್ಯುತ್ತಮ ವರದಿ ಪ್ರಶಸ್ತಿಗೆ ನ್ಯೂಸ್ 18ನ ವರದಿಗಾರ ಕೆ.ಎಸ್. ಆನಂದ್ ಮತ್ತು ವಿಡಿಯೋಗ್ರಾಫರ್ ರಾಹುಲ್. ಪಿ. ಹಾಗೂ ಇಂಡಿಯನ್ ಟಿವಿಯ ವರದಿಗಾರ ಚಂದನ್ ಬಲರಾಮ, ವಿಡಿಯೋಗ್ರಾಫರ್ ಎಲ್. ಸತೀಶ್ ಅವರು ಆಯ್ಕೆಯಾಗಿದ್ದಾರೆ. (ವಿದ್ಯುನ್ಮಾನ ಮಾಧ್ಯಮ ವರದಿ ಪ್ರಶಸ್ತಿಯನ್ನು ಈ ಬಾರಿ ಎರಡು ಸಂಸ್ಥೆಗಳು ಹಂಚಿಕೊಂಡಿವೆ)
ಹಾಗೂ ಸೌತ್ ಇಂಡಿಯಾ ಮಿಡಿಯಾ ಅವಾರ್ಡ್ ಗೌರವ ಪುರಸ್ಕಾರಕ್ಕೆ ಭಾಜನರಾದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನಗರ ಉಪಾಧ್ಯಕ್ಷ ಮತ್ತು ನ್ಯೂಸ್ ಫಸ್ಟ್ ವರದಿಗಾರ ರವಿ ಪಾಂಡವಪುರ ಹಾಗೂ ಹಿರಿಯ ವರದಿಗಾರರಾದ ಟಿವಿ-9ನ ರಾಮ್ ಅವರಿಗೆ ಅತ್ಯುತ್ತಮ ವರದಿಗಾರ ಮತ್ತು ವರದಿಗಾರಿಕೆಗೆ ಪ್ರಶಸ್ತಿ ಲಭಿಸಿದೆ.
ವಿಧಾನ ಪರಿಷತ್ ಸದಸ್ಯರಾಗಿ ಸರ್ಕಾರದಿಂದ ನೇಮಕವಾಗಿರುವ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಇಂಡಿಯನ್ ಏಕ್ಸ್ ಪ್ರೆಸ್ ಪತ್ರಿಕೆ ಬ್ಯೂರೋ ಮುಖ್ಯಸ್ಥ ರಾದ ಡಾ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡ ಹಿನ್ನೆಲೆಯಲ್ಲಿ ಇವರನ್ನು ಇದೆ ಸಂದರ್ಭದಲ್ಲಿ ಅಭಿನಂದಿಸಲಾಗುತ್ತದೆ.
ಈ ಎಲ್ಲ ಹಿರಿಯ ಪತ್ರಕರ್ತರು, ಪ್ರಶಸ್ತಿ ವಿಜೇತರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಡಳಿತ ಮಂಡಳಿಯು ಹೃದಯಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್ ಮತ್ತು ಪ್ರದಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


