ಮೈಸೂರು: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಾಣಲಿ, ಅವರು ಪೂರ್ಣವಾಗಿ ಗುಣಮುಖರಾಗಲಿ ಎಂದು ಚಾಮರಾಜ ವಿಧಾನ ಸಭಾ ಕ್ಷೇತ್ರದ ಪಡುವಾರಹಳ್ಳಿಯ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ನಗರ ಪಾಲಿಕೆ ಸದಸ್ಯರಾದ ಸುಬ್ಬಯ್ಯ, ಶಿವಣ್ಣ, ಪ್ರೇಮ ಶಂಕರೇಗೌಡ, ರವೀಂದ್ರ ಹಾಗೂ ಕ್ಷೇತ್ರದ ಅಧ್ಯಕ್ಷರಾದ ದಿನೇಶ್, ಮುಖಂಡರಾದ ಸೋಮಶೇಖರ್ ರಾಜು, ಮಾಜಿ ನಗರಪಾಲಿಕೆ ಸದಸ್ಯ ಎಂ .ಚಿಕ್ಕವೆಂಕಟು, ಪಡುವಾರಹಳ್ಳಿಯ ಗ್ರಾಮಾಭ್ಯುದಯ ಟ್ರಸ್ಟ್ ಕಾರ್ಯದರ್ಶಿ ಎಂ. ಭೈರಪ್ಪ, ಶ್ರೀರಾಮ, ಪುನೀತ್, ರಮೇಶ್, ರಾಮೇಗೌಡ ವಾರ್ಡ್ ಬಿಜೆಪಿ ಅಧ್ಯಕ್ಷ ಆಟೋ ಮಂಜು, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಎಸ್ ಕೃಷ್ಣಕುಮಾರ್(CD), ಉಪಾಧ್ಯಕ್ಷ ಸಿ ಸಂತೋಷ್, ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿ. ಮಧು, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎನ್. ಯೋಗಾನಂದ್, ಸುಧಾ, ಛಾಯಾ, ಲಕ್ಷ್ಮಿ, ಈ.ಬಸವರಾಜು, ಪಡುವಾರಹಳ್ಳಿಯ ಎಂ ರಾಮಕೃಷ್ಣ, ನಾಗೇಶ್, ಜಯಣ್ಣ, ಅಶೋಕ್, ಹರೀಶ್, ಕಿರಣ್, ಅರ್ಜುನ್, ಶ್ರೀನಿವಾಸ್, ವೆಂಕಟೇಶ್ ಮತ್ತಿತರ ಮುಖಂಡರು, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


