ವರದಿ: ಮುಕುಂದ ರಾವಂದೂರು
ಪಿರಿಯಾಪಟ್ಟಣ: ತಾಲೂಕಿನ ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜಾಗದೆ ತೊಂದರೆ ಅನುಭವಿಸಿ ಇಡೀ ಕುಟುಂಬವೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿತ್ತು. ಇದರಿಂದ ಸಾಲ ಮಾಡಿ ತೀರಿಸಲಾಗದೆ ಹಲವಾರು ರೈತರು ಆತ್ಮಹತ್ಯೆಗೂ ತುತ್ತಾಗಿದ್ದಾರೆ. ಇದನ್ನು ಮನಗಂಡು ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಬಾರದು ಎಂಬ ಆಲೋಚನೆಯಿಂದ ಸಚಿವ ಕೆ ವೆಂಕಟೇಶ್ ಕುಸುಮ್-ಸಿ ಯೋಜನೆ ಅಡಿ ಸೋಲಾರ್ ವಿದ್ಯುತ್ತನ್ನು ರೈತರಿಗೆ ನೀಡಲು ಮುಂದಾಗಿದ್ದಾರೆ. ಈ ಯೋಜನೆ ನಾಳೆ ಸಚಿವ ಕೆ.ವೆಂಕಟೇಶ್ವಿ ದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ತಾಲೂಕಿನ ಗೋರಳ್ಳಿ ಹತ್ತಿರ 23 ಎಕರೇ ಜಮೀನಿನಲ್ಲಿ ಹಾಗೂ ಮರಡಿಯೂರಿನಲ್ಲಿ 14 ಎಕರೆ ಚಿಕ್ಕಮಾಗಳಿ ಹತ್ತಿರ 41 ಎಕರೆ ಜಾಗಗಳಲ್ಲಿ. ಒಟ್ಟು 78 ಎಕರೆ ವಿಸ್ತೀರ್ಣ ಜಾಗದಲ್ಲಿ ಸೋಲಾರ್ ವಿದ್ಯುತ್ತನ್ನು ಅಳವಡಿಸುವ ಮೂಲಕ ಒಟ್ಟು 27 ಮೆಗಾ ವ್ಯಾಟ್ ತಯಾರಿಕೆ ಸೋಲಾರ ಅಳವಡಿಸುವ ಮೂಲಕ ಗ್ರಾಮೀಣ ಜನರು ಯಾವುದೇ ವಿದ್ಯುತ್ ಸಮಸ್ಯೆ ಇಲ್ಲದೆ ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಂಡು ರೈತರು ಆರ್ಥಿಕ ಅಭಿವೃದ್ಧಿ ಜೊತೆಗೆ ಉತ್ತಮ ಬದುಕು ನಡೆಸಲು ಈ ಯೋಜನೆಯನ್ನು ಸಚಿವರು ಜನರ ಸಮಸ್ಯೆಗಳನ್ನ ಅರಿತು ಈ ಶಾಶ್ವತ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಾಮೀಣ ರೈತರ ಬದುಕಿಗೆ ಆಶಾ ದೀಪವಾಗಿದ್ದಾರೆ.

ಹಲವಾರು ವರ್ಷಗಳಿಂದ ವಿದ್ಯುತ್ ಸಮಸ್ಯೆಯಿಂದಾಗಿ ರೈತರ ಬೆಳೆದ ಬೆಳೆಗೆ ನಿಗದಿತ ಸಮಯಕ್ಕೆ ನೀರು ಸರಬ ರಾಜು ಆಗದೆ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಕುಸುಮ್-ಸಿ ಯೋಜನೆ ಅಡಿ ಸೋಲಾರ್ ವಿದ್ಯುತ್ತನ್ನು ಅಳವಡಿಸುವ ಮೂಲಕ ತಾಲೂಕಿನ ರೈತರ ವಿದ್ಯುತ್ ಸಮಸ್ಯೆಯನ್ನು ಮುಕ್ತಗೊಳಿಸಿ ಹಾರ್ದಿಕ ಬದುಕು ನಡೆಸಲು ಸಹಕಾರಿಯಾಗಿದೆ. ಸಚಿವ ಕೆ ವೆಂಕಟೇಶ್ ಗ್ರಾಮೀಣ ಜನರ ಸಮಸ್ಯೆಯನ್ನಾಲಿಸಿದ ಸಚಿವರು ಈ ವಿದ್ಯುತ್ ಯೋಜನೆಯನ್ನು ಅನುಷ್ಠಾನ ಗೊಳಿಸುವ ಮೂಲಕ ಜನರ ಅಶೋತ್ತರವನ್ನ ಈಡೇರಿಸಿದಂತಾಗಿರುತ್ತದೆ.
-ಎಡಬಲ್ಇ ಚೆಸ್ಕಾಂ ಗುರುಬಸವ ಸ್ವಾಮಿ
ಹಲವಾರು ವರ್ಷಗಳಿಂದ ವಿದ್ಯುತ್ ಸಮಸ್ಯೆಯಿಂದಾಗಿ ಕೃಷಿ ಚಟುವಟಿಕೆ ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜ ಆಗದೆ ತೊಂದರೆ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೂ ಸಹ ಗುರಿಯಾಗಿದೆ ಆದುದರಿಂದ ಈ ಸಮಸ್ಯೆ ಅರಿತು ಸಚಿವರು ರೈತರಿಗೆ ಅನುಕೂಲವಾಗಲು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವುದು ಸಂತೋಷದ ವಿಷಯವಾಗಿದೆ. .
-ಜಗದೀಶ್ ಗೋರಳ್ಳಿ.


