Online News in ಕನ್ನಡ

81 ಕೋಟಿ ವೆಚ್ಚದಲ್ಲಿ ಸೂಳೆಕೆರೆ ಅಭಿವೃದ್ಧಿಗೆ ಸಂಪುಟ ಅಸ್ತು : ಶಾಸಕ ಕೆ.ಎಂ ಉದಯ್ 

ಕೆ.ಎಂ ದೊಡ್ಡಿ : ಚಿಕ್ಕರಸಿನಕೆರೆ ಹಾಗೂ ಭಾರತಿನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ರೈತರ ಬಹುದಿನದ ಬೇಡಿಕೆಯಾದ ಸೂಳೆಕೆರೆ ಹಾಗೂ ಅದರ ವ್ಯಾಪ್ತಿಗೆ ಬರುವ ಉತ್ತರ ನಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ರೈತರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಿದೆ.

ಮದ್ದೂರು ಕ್ಷೇತ್ರದ ಶಾಸಕರಾದ ಕೆ.ಎಂ ಉದಯ್ ರವರ ಪರಿಶ್ರಮದಿಂದ ಸೂಳೆಕೆರೆ ನಾಲಾ ಭಾಗದ ರೈತರ ಬಹುದಿನದ ಬೇಡಿಕೆಯಾದ ಸೂಳೆಕೆರೆ ಅಭಿವೃದ್ಧಿ ಹಾಗೂ ನಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಸುಮಾರು 81.75 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಶಾಸಕ ಕೆ.ಎಂ ಉದಯ್ ರವರ ಪರಿಶ್ರಮಕ್ಕೆ ತಕ್ಕ ಪ್ರತಿಫಲದೊರಕಿದಂತಾಗಿದೆ .

ಈ ಅಭಿವೃದ್ಧಿ ಮಹತ್ವಪೂರ್ಣ ಕಾಮಗಾರಿ ಯೋಜನೆಯಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ನಿರುಣಿಸಲು ಅನುಕೂಲವಾಗಿದ್ದು ,ರೈತರಿಗೆ ಸಮಪರ್ಕವಾಗಿ ನೀರು ಪೂರೈಕೆಯಾಗಲಿದ್ದು ನಾಲೆಗಳು ಸುಧಾರಣೆ ಕಾಣಲಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ವರದಾನವಾಗಲಿದೆ ಪರಿಸರ ಸಂರಕ್ಷಣೆಗೆ ಒತ್ತುನೀಡಿ ಸ್ಥಳೀಯವಾಗಿ ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ.

ಶಾಸಕರಾದ ಕೆ.ಎಂ ಉದಯ್ ರವರು ಮದ್ದೂರು ತಾಲೋಕಿನ ಅಭಿವೃದ್ಧಿ ಸರ್ಕಾರದಿಂದ ಸುಮಾರು ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯವನ್ನು ಕೈಗೊಂಡು ಸಾಧನೆಗೈಯುತ್ತಿರುವ ಶಾಸಕರ ಅಭಿವೃದ್ಧಿ ಕಾರ್ಯಗಳ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ ಎಂದು ತಾಲೂಕಿನ ರೈತರು ಮುಕ್ತವಾಗಿ ಪ್ರಶಂಸಿದ್ದಾರೆ.

Call Now Button