Online News in ಕನ್ನಡ

ಸುಂಟಿಕೊಪ್ಪ: ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ಕೊಡಗು : ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಗೆ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ಜರುಗಿದೆ.
ಕುಶಾಲನಗರ ತಾಲೂಕು ಗರಗಂದೂರು ಗ್ರಾಮದ ನಿವಾಸಿಗಳಾದ ರಹೀಜ್‌ (೧೬), ಮಹಮದ್‌ ನಿಹಾಲ್‌ (೧೬) ಮೃತ ವಿದ್ಯಾರ್ಥಿಗಳು. ಕಾಲೇಜು ಮುಗಿಸಿ ನದಿಗೆ ಈಜಲು ತೆರಳಿದ್ದಾಗ ಈ ಘಟನೆ ಜರುಗಿದೆ.
ಸ್ಥಳಕ್ಕೆ ಸುಂಟಿಕೊಪ್ಪ ಪೊಲಲೀಸರು ಭೇಟಿ ನೀಡಿ ಮೃತ ದೇಹಗಳನ್ನು ಹೊರ ತೆಗೆದು ಕುಶಾಲನಗರ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಾಗಿದೆ.

Call Now Button