ಇಂದು ಭಾರತವೂ ಸೇರಿದಂತೆ 48 ರಾಷ್ಟ್ರಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನ ಮಹಿಳೆಯರ ಆರ್ಥಿಕ, ಸಾಮಾಜಿ ಮತ್ತು ರಾಜಕೀಯ ಸಾಧನೆಗಳನ್ನು ಸ್ಮರಿಸಲಾಗುತ್ತದೆ. 1909ರಲ್ಲಿ ಉತ್ತರ ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರದಲ್ಲಿ ಕೂಲಿ ಚಳವಳಿಯ ಮೂಲಕ ಆರಂಭಗೊಂಡ ಮಹಿಳಾ ಹಕ್ಕುಗಳ ಹೋರಾಟ, 1911ರಲ್ಲಿ ಮತದಾನದ ಹಕ್ಕು ಮತ್ತು ಉದ್ಯೋಗ ಹಕ್ಕುಗಳಿಗಾಗಿ ಮೊದಲ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮುಂದುವರೆದು ಸಂಯುಕ್ತ ರಾಷ್ಟ್ರ ಗಳಲ್ಲಿ ಲಿಂಗ ಸಮಾನತೆ ಹಕ್ಕುಗಳಿಗೆ ಅಂಗೀಕಾರ ದೊರಕಿತು.
ಶತಮಾನ ಕಂಡ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸಬಲೀಕರಣದ ಚರ್ಚೆ, ವಿಮರ್ಶೆ ಮತ್ತು ಪ್ರಶಂಸೆಗಳು ನಡೆಯುತ್ತಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತಾದ ಚರ್ಚೆಗಳು ಗೌಣವಾಗಿದೆ. ಒಂದು ದೇಶ ಅಥವಾ ಮಾನವನ ವಿಕಾಸದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದ್ದು ಜಗತ್ತು ಮತ್ತು ಮಾನವನ ಜೀವನ ವಿಜ್ಞಾನದ ನೆಲೆಯಲ್ಲಿ ರೂಪಿತಗೊಂಡಿರುವಾಗ ಸರಾಸರಿ ಶೇ. 50 ರಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಅಥವಾ ಪರಿಪೂರ್ಣ ಪಾಲ್ಗೊಳ್ಳುವಿಕೆ ಸಾಧ್ಯವಾಗಿದೆಯೆ ?
ಲಿಂಗ ಸಮಾನತೆಯ ಚರ್ಚೆಗಳಲ್ಲಿ ವಿಜ್ಞಾನ ತಂತ್ರಜ್ಞಾನದಿಂದ ಮಹಿಳೆ ಸಶಕ್ತಳಾಗಿರುವುದನ್ನು ನಾವು ಒಪ್ಪುವುದಾದರೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (Sಖಿಇಒ) ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರಗಳನ್ನು ವಿಸ್ತರಿಸುವ ಚರ್ಚೆಗಳೂ ಅಗತ್ಯವಾಗಿದೆ .ಈ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಹಲವಾರು ಸಾಂಸ್ಕೃತಿಕ, ಸಾಮಾಜಿಕ ಮತ್ತು ತಾಂತ್ರಿಕ ಅಡೆತಡೆಗಳಿವೆ. 2018ರಲ್ಲಿ UಓಇSಅಔ ನಡೆಸಿದ ಅಧ್ಯಯನದ ಪ್ರಕಾರ, ಜಗತ್ತಿನಲ್ಲಿ ಕೇವಲ 33% ಸಂಶೋಧಕರಷ್ಟೇ ಮಹಿಳೆಯರಾಗಿದ್ದು ಇದು ಕೃತಕ ಬುದ್ಧಿಮತ್ತೆ (ಂI) ಮುಂತಾದ ಕ್ಷೇತ್ರಗಳಲ್ಲಿ ಕೇವಲ 22% ನಷ್ಟಿದೆ. 2025ರ ಆಂತಾರಾಷ್ಟ್ರೀಯ ಮಹಿಳಾ ದಿನ ಘೋಷಣೆ “ಆಕ್ಸಿಲರೇಟ್ ಆಕ್ಷನ್ “- ಎಂಬ ವಿಷಯವು ಲಿಂಗ ಸಮಾನತೆಯ ಕಡೆಗೆ ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯನ್ನು ಸಾರಿ ಹೇಳುತ್ತಿದ್ದು ಮತ್ತು ಲಿಂಗ ಸಮಾನತೆಯ ಗುರಿ ಸಾಧನೆಗೆ ಇನ್ನೂ ಶತಮಾನಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂಬ ಆತಂಕದ ವಿಷಯವನ್ನು ಹೊರಹಾಕಿದೆ.
ಮಹಿಳೆಯರ ಕೊಡುಗೆಗಳಿಲ್ಲದೆ, ವಿಜ್ಞಾನವು ತನ್ನ ಸಂಪೂರ್ಣ ಶಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ. ತತ್ವಶಾಸ್ತ್ರಜ್ಞರ ಪ್ರಕಾರ ಮಹಿಳೆಯರ ಬೌದ್ಧಿಕ ಪ್ರಜ್ಞೆ ವಿಜ್ಞಾನ ಕ್ಷೇತ್ರದಲ್ಲಿ ಹೊಸ- ಹೊಸ ದೃಷ್ಟಿಕೋನವನ್ನು ಒದಗಿಸುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಸಮಾನವಾಗಿ ಇರುವ ತರ್ಕ ಜ್ಞಾನಕ್ಕಿಂತ, ಮಹಿಳೆಯರು ಹೊಂದಿರುವ ಭಾವನಾತ್ಮಕ ಬುದ್ಧಿಮತ್ತೆ ಮತ್ತು ವಿಚಾರ ಸಾಮರ್ಥ್ಯವು ಬಹುಮುಖವಾದ ವಿಜ್ಞಾನ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಆರೋಗ್ಯ ಮತ್ತು ಪರಿಸರ ಸಂಬಂಧಿತ ಸಂಶೋಧನೆಗಳಲ್ಲಿ ಅಮೂಲ್ಯವಾಗಿದೆ.
ಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಕಿ ಅಂಶದ ಪ್ರಕಾರ, ಭಾರತದಲ್ಲಿ ಮಹಿಳಾ ಸಂಶೋಧಕರ ಸಂಖ್ಯೆ 18.6% ಮಾತ್ರ ಇದೆ. Sಖಿಇಒ ಶಿಕ್ಷಣದಲ್ಲಿ 43% ಮಹಿಳೆಯರು ಪದವಿ ಪಡೆಯುತ್ತಿದ್ದರೂ, ಉನ್ನತ ಸಂಶೋಧನೆ ಮತ್ತು ನಾಯಕತ್ವ ಹುದ್ದೆಗಳಲ್ಲಿ ಅವರ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಮಹಿಳೆಯರು ವಿವಾಹ ಮತ್ತು ಹೆರಿಗೆಯ ಬಳಿಕ ಸಂಶೋಧನಾ ಕ್ಷೇತ್ರದಿಂದ ಹೊರಗುಳಿಯುವ ಪ್ರಮಾಣ ಹೆಚ್ಚಿದ್ದು ಇದನ್ನು ಟeಚಿಞಥಿ ಠಿiಠಿe ಟiಟಿe (ಸೋರುವ ಕೊಳವೆ ಮಾರ್ಗ) ಎಂದು ಕರೆಯುತ್ತಾರೆ. ಪಿತೃಪ್ರಧಾನ ಸಮಾಜ, ಕುಟುಂಬ ನಿರ್ವಹಣೆ, ಪ್ರಕೃತಿದತ್ತ ದೈಹಿಕ ಗುಣಾಂಶಗಳು, ವೇತನ ತಾರತಮ್ಯ, ಸುರಕ್ಷತೆ ಜೊತೆಗೆ ಮಾರ್ಗದರ್ಶನದ ಕೊರತೆಯಿಂದಾಗಿ ಉನ್ನತ ಹುದ್ದೆಗಳಲ್ಲಿ ಮತ್ತು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ.
ಭಾರತ ಸರ್ಕಾರವು 2020ರಲ್ಲಿ ಬಿಡುಗಡೆ ಮಾಡಿದ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ನೀತಿ (SಖಿIP 2020), Sಖಿಇಒ ಕ್ಷೇತ್ರದಲ್ಲಿ 2030ರೊಳಗೆ ಮಹಿಳಾ ಪೋಸ್ಟ್-ಡಾಕ್ಟರೇಟ್ ಸಂಶೋಧಕರನ್ನು 30% ತಲುಪಿಸುವ ಗುರಿಯನ್ನು ಹೊಂದಿದೆ. ಇದನ್ನು ಸಾಧಿಸಲು, ಶಾಲಾ ಹಂತದಲ್ಲಿಯೇ ಬಾಲಕಿಯರನ್ನು ವಿಜ್ಞಾನ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜಿಸುವಂತಹ ‘ವಿಜ್ಞಾನ ಜ್ಯೋತಿ’ ಯೋಜನೆಯನ್ನು ರೂಪಿಸಿದೆ. ಇದಲ್ಲದೆ, ಮಹಿಳಾ ವಿಜ್ಞಾನಿಗಳಿಗೆ ಆರ್ಥಿಕ ಬೆಂಬಲ, ಸಂಶೋಧನಾ ಮೂಲಸೌಕರ್ಯ, ಅವಕಾಶ ಸೃಷ್ಟಿ ಮತ್ತು ಸಂಶೋಧನೆಗೆ ಪೂರಕ ವಾತಾವರಣವನ್ನು ಕಲ್ಪಿಸುವ ಯೋಜನೆ ಇದಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಲಿಂಗ ಸಮಾನತೆ ಸಾಧಿಸಲು, ಸರ್ಕಾರದ ಮಟ್ಟದಲ್ಲಿ ಅಷ್ಟೇ ಅಲ್ಲದೆ, ಸಾಮಾಜಿಕ ಪರಿವರ್ತನೆಗಳ ಅಗತ್ಯವೂ ಇದೆ. ಈ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ ಮಾತ್ರವಲ್ಲದೆ, ಅವರ ಪ್ರತಿಭೆಗೆ ಮಾನ್ಯತೆ ನೀಡಲು ನಮ್ಮ ಸಮಾಜ, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಗಳು ಮುಂದಾಗಬೇಕಿದೆ. ಸಮಾನತೆ ಮತ್ತು ವೈಜ್ಞಾನಿಕ ಪ್ರಗತಿ ಪರಸ್ಪರ ಒಗ್ಗೂಡಿದಾಗ ಮಾತ್ರ, ಮಾನವನ ಪರಿಪೂರ್ಣ ವಿಕಾಸ ಸಾಧ್ಯ ಅಲ್ಲವೆ ?
ಶ್ರೀಮತಿ ವಿಭಾವಸು.ಕೆ.ಆರ್
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರು.
ಮೈಸೂರು.

