Online News in ಕನ್ನಡ

ಮೈಸೂರು ಜಿಲ್ಲೆಯ ಸುತ್ತ ಮುತ್ತ ಸೆರೆ ಸಿಕ್ಕ ಹುಲಿಗಳ ಸಂಖ್ಯೆ ಎಷ್ಟು ಗೊತ್ತೆ ?

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು ಪ್ರತಿ ದಿನ ಹುಲಿ ದಾಳಿ, ಹುಲಿ ಕಾರ್ಯಾಚರಣೆ, ಹುಲಿ ಸೆರೆ ಸುದ್ದಿಗಳು ಪ್ರಕಟಗಳ್ಳುತ್ತಿದೆ. ಈಗಾಗಲೇ ಹುಲಿಗಳ ದಾಳಿಗೆ ಹತ್ತಾರು ಜಾನುವಾರುಗಳು ಬಲಿಯಾಗಿರುವುದು ಮಾತ್ರವಲ್ಲ ಮನುಷ್ಯ ಮೇಲೂ ಹುಲಿಗಳು ದಾಳಿ ನಡೆಸಿ ಕೊಂದು ಹಾಕಿವೆ. ಸದ್ಯ ಹೆಚ್.ಡಿ.ಕೋಟೆ, ಹುಣಸೂರು, ನಂಜನಗೂಡು ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಾಗಿ ಜನರು ಜೀವ ಕೈಯಲ್ಲಿಡಿದು ಬದುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಹುಣಸೂರು ತಾಲೂಕಿನ ಗುರುಪುರದಲ್ಲಿ ಹುಲಿ ಮರಿವೊಂದನ್ನು ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಇದೀಗ ಹುಲಿ ಮರಿ ಪತ್ತೆಯಾಗಿರುವುದರಿಂದ ತಾಯಿ ಹುಲಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಹಿಂದೆ ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ತಾಯಿ ಹುಲಿ ಸೇರಿ ನಾಲ್ಕು ಮರಿ ಹುಲಿಗಳನ್ನು ಸೆರೆ ಹಿಡಿಯಲಾಗಿತ್ತು. ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಮರಿಗಳು ಸೇರಿದಂತೆ 25ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿದು ಸುರಕ್ಷಿತಾ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

Call Now Button