ಬೆಮೆಲ್ ಕಂಪನಿಯಲ್ಲಿ ಹುಲಿ ಪ್ರತ್ಯಕ್ಷ
ಮೈಸೂರು : ಮೈಸೂರಿನ ಹೊರವಲಯದ ಬಿಇಎಂಎಲ್ ಕಂಪನಿ ಒಳಗೆ ಹುಲಿ ಪ್ರತ್ಯಕ್ಷಗೊಂಡಿದ್ದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ. ಕಳೆದ ಶುಕ್ರವಾರ ಕಾರಿನಲ್ಲಿ ತೆರಳುತ್ತಿದ್ದವರಿಂದ ಹುಲಿ ದೃಶ್ಯ ಸೆರೆ ಸಿಕ್ಕಿದೆ. ಸ್ಥಳಕ್ಜೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ರಾತ್ರಿ ಹೊತ್ತು ಬೆಮೆಲ್ ಸುತ್ತಮುತ್ತ ಓಡಾಡುವವರು ಎಚ್ಚರ ವಹಿಸುವಂತೆ ಸೂಚನೆ.
ಮೈಸೂರು ಜಿಲ್ಲೆ ನಂಜನಗೂಡು, ಹುಣಸೂರು, ಹನಗೋಡು, ಹೆಚ್.ಡಿ.ಕೋಟೆ, ಸರಗೂರು ಭಾಗದಲ್ಲಿ ಕಳೆದ 2 ತಿಂಗಳಿನಿಂದ ಹುಲಿ ಹಾವಳಿ ಹೆಚ್ಚಾಗಿ ಮನುಷ್ಯರನ್ನು ಬಲಿ ತೆಗೆದುಕೊಂಡು ಸಿಕ್ಕಸಿಕ್ಕ ಜಾನುವಾರುಗಳನ್ನು ಕೊಂದು ಹಾಕಿದೆ. ಅರಣ್ಯ ಸಿಬ್ಬಂದಿಗಳು ಹುಲಿ ಸೆರೆ ಹರಸಾಹಸ ಪಡುತ್ತಿದ್ದು ಈವರೆಗೆ 4 ಹುಲಿಗಳು ಮತ್ತು ಮರಿಗಳನ್ನು ಸೆರೆ ಹಿಡಿದಿದ್ದರೂ, ಹುಲಿ ದಾಳಿ ನಿಂತಿಲ್ಲ. ಇದೀಗ ಮೈಸೂರು ನಗರಕ್ಕೆ ಹತ್ತಿರವಿರುವ ಬೆಮೆಲ್ ಕಂಪನಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹೊರ ಹೊಲಯದ ಬಡಾವಣೆಗಳಲ್ಲಿ ಆತಂಕ ಮೂಡಿಸಿದೆ.


