ಮೈಸೂರು: ಒಳ ಮೀಸಲಾತಿ ಹಂಚಿಕೆಯನ್ನು ಹೊಲೆಯ ಮತ್ತು ಮಾದಿಗ ಸಮುದಾಯಗಳ ಸೌಹಾರ್ದತಯುವಾಗಿ ಬಗೆಹರಿಸಿಕೊಳ್ಳಬೇಕೆಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಗಿದೆ.
ನಗರದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಶನಿವಾರ ಸಂಜೆ ನಡೆದ ಸಭೆಯು ಬೆಂಗಳೂರಲ್ಲಿ ಮಾ. 25ರಂದು ಬಲಗೈ ಸಂಘಟನೆಗಳಿಂದ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಸಿದ್ಧತೆ ಕುರಿತು ಚರ್ಚಿಸಲಾಯಿತು.
ಈಚೆಗೆ ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನ ಸಮಾವೇಶದಲ್ಲಿ ಮುಖಂಡರೊಬ್ಬರ ಭಾಷಣಕ್ಕೆ ಅಡ್ಡಿಪಡಿಸಿ ಪ್ರಶ್ನೆ ಮಾಡಿ ಕೇಳಿರುವುದು ರಾಜ್ಯದಲ್ಲಿ ಹೊಲಯ -ಮಾದಿಗರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸುತ್ತಾ ಉದ್ದೇಶ ಪೂರ್ವಕವಾಗಿ ಬಲಗೈ ಸಚಿವರನ್ನೆ ಟಾರ್ಗೆಟ್ ಮಾಡುತ್ತಿರುವುದು ನೋವಿನ ಸಂಗತಿ ಎಂದು ಸಮಿತಿ ಅಧ್ಯಕ್ಷ ಎನ್. ಭಾಸ್ಕರ್ ತಿಳಿಸಿದರು.
ಮಾ. 27ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಮಗೆ ಅನ್ಯಾಯವಾದರೆ ರಕ್ತ ಪಾತಾಕ್ಕೂ ಸಿದ್ದ ಎಂಬ ಸಂವಿಧಾನ ಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ವಕೀಲ ಎಸ್.ಅರುಣ್ ಕುಮಾರ್ ವಿರುದ್ಧ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ.
-ಎನ್.ಭಾಸ್ಕರ್
ಮೊದಲಿಂದಲೂ ಬಲಗೈ ಮತ್ತು ಸಚಿವರನ್ನು ಟೀಕಿಸುತ್ತಿರುವ ವಕೀಲ ಎಸ್.ಅರುಣ್ ಕುಮಾರ್ ರವರನ್ನು ಪ್ರಶ್ನೆ ಮಾಡಿ ಚೆನ್ನಾಗಿರುವ ಎರಡು ಸಮುದಾಯವನ್ನು ಒಡೆಯುವುದು ಬೇಡ ಎಂದು ಕೇಳಿರುವುದು ಸ್ವಾಗತರ್ಹ. ಈಗಲಾದರೂ ಎರಡು ಸಮುದಾಯಗಳು ಒಟ್ಟಾಗಿ ಸಮಾನವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಲು ಎರಡು ಸಮುದಾಯದ ಸಚಿವರುಗಳಿಗೆ ಬಿಟ್ಟುಕೊಡಿ ಇದನ್ನು ಬಿಟ್ಟು ವರ್ಷವಿಡಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಎರಡು ಸಮುದಾಯ ಹೋರಾಟ ಮತ್ತು ಪ್ರತಿ ಹೋರಾಟ ಮಾಡಿಕೊಂಡರೆ ಪ್ರಯೋಜನವಿಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯವರು ಆರ್ ಎಸ್ಎಸ್ ನ ವಾದಿರಾಜನ್, ಬಿಜೆಪಿಯ ಎನ್. ಮಹೇಶ್, ಬಿಜೆಪಿ ಕೃಪಾಪೋಶಿತ ಎಸ್ ಅರುಣ್ ಕುಮಾರ್ ಮತ್ತು ಭಾಸ್ಕರ್ ಪ್ರಸಾದ್ ನಂತವರನ್ನು ಬಿಟ್ಟು ಎರಡು ಸಮುದಾಯವನ್ನು ಹಾಳು ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಸಮಾನ ಹಂಚಿಕೆ ಸೂತ್ರಕ್ಕೆ ಬರಲು ಎರಡು ಸಮುದಾಯದ ಸಚಿವರಿಗೆ ಬಿಡೋಣ ಈ ರೀತಿಯ ಕಿತ್ತಾಟದಿಂದ ಸರ್ಕಾರ ಮತ್ತು ಎರಡು ಸಮುದಾಯದ ಸಚಿವರಿಗೆ ಮುಜುಗರವಾಗುತ್ತದೆ.
ಇದಕೋಸ್ಕರ ಯಾವ ಸಚಿವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಇದನ್ನು ನಾವೇ ಬಗೆಹರಿಸಿಕೊಳ್ಳಲು ಸಹಕರಿಸೋಣ. ರಾಜ್ಯದಲ್ಲಿ ನಾವು ಒಗ್ಗಟ್ಟು ಪ್ರದರ್ಶನ ಮಾಡಿ ಜೋತೆ ಜೋತೆಯಲ್ಲೇ ಸಾಗೋಣ ಕುತಂತ್ರಿ, ಕಿಡಿಗೇಡಿಗಳನ್ನು ದೂರ ವಿಡೋಣ ಎಂದು ಹೇಳಿದ್ದಾರೆ. ಸಭೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ರಾಜ್ಯ sc/st ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ ಚಂದ್ರಶೇಖರಯ್ಯ ಅಶೋಕಪುರಂ ದೊಡ್ಡ ಗರಡಿ ಅಧ್ಯಕ್ಷ ಜೋಗಿ ಮಹೇಶ ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ ಎಂ ವಿ ಚಂದ್ರಶೇಖರ್ ವಕೀಲರಾದ ಎಚ್ ಎಸ್ ಪುಟ್ಟರಸ. ತಿಮ್ಮಯ್ಯ. ಮಂಜುಳಾ. ಮನೋನ್ಮಣಿ ಡಿಸಿಸಿ ಕಿಸಾನ್ ಸೆಲ್ ಅಧ್ಯಕ್ಷ ಜಿ ಮಹಾದೇವ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ನಗರಾಧ್ಯಕ್ಷರಾದ ಜೆ ಪ್ರಭು ಮುಖಂಡರಾದ ಮಣಿಯಯ್ಯ.ಜ್ಞಾನ ಪ್ರಕಾಶ್.ಪುಟ್ಟರಾಜು ಮತ್ತಿತರರು ಭಾಗವಹಿಸಿ ದ್ದರು


