Online News in ಕನ್ನಡ

ಮೈಸೂರಿನಲ್ಲಿ 1,500 ಮಕ್ಕಳ ಕ್ರೀಡಾ ಪ್ರತಿಭಾನ್ವೇಷಣೆ

ಮೈಸೂರು; ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ವಸತಿ ಶಿಕ್ಷಣಗಳ ಸಂಘ ಹಾಗೂ ಸಿಕ್ಸ್ ಸ್ಟೋರ್ಟ್ಸ್ ಸೆಂಟರ್ ಫಾರ್ ಸ್ಪೋರ್ಟ್ಸ್ ಸೈನ್ಸ್ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಕ್ಕಳ ಕ್ರೀಡಾ ಪ್ರತಿಭಾನ್ವೇಷಣೆ ನಡೆಯಿತು.
ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಅವಕಾಶ ಮಾಡಲಾಗಿದೆ. ಪ್ರತಿ ದಿನ 500 ವಿದ್ಯಾರ್ಥಿಗಳಂತೆ ಮೂರು ದಿನಗಳ ಕಾಲ 1500 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.

 

ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತಿಯ ಕ್ರೀಡಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುವ ಉದ್ದೇಶ ಈ ಪ್ರತಿಭಾನ್ವೇಷಣೆಯದ್ದಾಗಿದ್ದು, ಮಕ್ಕಳು ಉತ್ಸಾಹದಿಂದಲೇ ಮೊದಲ ದಿನ ಪಾಲ್ಗೊಂಡಿದ್ದರು.

Call Now Button