Online News in ಕನ್ನಡ

ಮಹಾದಾಯಿ ಯೋಜನೆ: ಶೀಘ್ರ ಕೇಂದ್ರ ಸರಕಾರ ಸಂಪರ್ಕ: ಸಂಸದ ಜಗದೀಶ್ ಶೆಟ್ಟರ್

ಬೆಳಗಾವಿ,ಆಗಸ್ಟ್,1,2025 (vijayakaala.com):  ಬಹು ವರ್ಷಗಳಿಂದ ಕರ್ನಾಟಕದ ರಾಜಕೀಯ ವಸ್ತುವಾಗಿರುವ ಮಹಾದಾಯಿ ಯೋಜನೆ ಕುರಿತು ಕೇಂದ್ರ ಸರಕಾರವನ್ನು ಸಂಪರ್ಕಿಸಲಾಗುವುದು. ಈ ಬಾರಿ ನಮಗೆ ಒಳ್ಳೆಯ ಸುದ್ದಿ ಬರಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್,  ಮಹದಾಯಿ ಯೋಜನೆ ಕುರಿತು ಗೋವಾ ಸಿಎಂ ಹೇಳಿಕೆ ಸರಿಯಲ್ಲ.  ಕೇಂದ್ರದವರು ಅನುಮತಿ ಕೊಡಲ್ಲ ಎಂದು ಎಲ್ಲೂ ಹೇಳಿಲ್ಲ  ಗೋವಾ ಸಿಎಂ ಹೇಳಿಕೆಯಿಂದ ಅನಗತ್ಯ ಗೊಂದಲ ಸೃಷ್ಠಿಯಾಗಿದೆ.  ಶೀಘ್ರದ್ರಲ್ಲೇ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಮಾಡಲಿದೆ ಎಂದರು.

ಕಾಮಗಾರಿಗೆ ನಾವು ಯಾವುದೇ ವಿರೋಧ ಮಾಡಲ್ಲ.  ನಮ್ಮ ರಾಜ್ಯದ ನೀರನ್ನ ನಾವು ತಿರುವು ಮಾಡಿಕೊಳ್ಳಬಹುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Call Now Button